ಅಂಬೇಡ್ಕರ್ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.18
ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗಂ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ಹೆಚ್ಚು ಸಾರಿಗೆ ಸಂಸ್ಥೆಯ ನೌಕರರು ರಕ್ತದಾನ ಮಾಡುವ ಮೂಲಕ ಅಂಬೇಡ್ಕರ್ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸಾರಿಗೆ ನೌಕರರ ಕ್ಷೇಮಾಭಿವೃದ್ಧಿ ಅಧಿಕಾರಿ ಎಂ.ಆರ್. ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಹಾಲಪ್ಪ ಮಾತನಾಡಿ, ರಕ್ತದಾನ ಪ್ರಾಣ ಉಳಿಸುವ ಕಾರ್ಯವಾಗಿದೆ. ಇದಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳು ಮುಂದೆ ಬಂದರೆ ಅಪಾಯದಿಂದ ಪಾರು ಮಾಡಿದಂತಾಗುತ್ತದೆ ಎಂದರು. ರೆಡ್ ಕ್ರಾಸ್ ಸಂಸ್ಥೆ ಸುಂದ್ರೇಶ್ ಗೌಡ, ಸಂಘದ ಉಪಾಧ್ಯಕ್ಷ ಗೊದ್ರಿ ವಿನಾಯಕ, ಚಂದ್ರಯ್ಯ, ಶ್ರೀಹರಿ ಬಾಬು, ಸಂಚಾರ ಅಧಿಕಾರಿ ಚಿದಂಬರಂ, ಘಟಕ ಸ್ಥಾಪಕ ಸತೀಶ್, ಕಾರ್ಯಾಧ್ಯಕ್ಷ ಪ್ರಸೀಪ್, ಮಹೇಶ್, ಡಾ. ಶಿವದತ್, ಡಾ. ಪ್ರಕಾಶ್ ಇದ್ದರು.
--
ಚನ್ನಬಸವೇಶ್ವರ ರಥೋತ್ಸವ
ತರೀಕೆರೆ: ಸಮೀಪದ ಚಿಕ್ಕಾನವಂಗಲ ದೇವಾಲಯ ಸಮಿತಿ ಭಕ್ತ ಮಂಡಳಿ ಮತ್ತು ಗ್ರಾಮಸ್ಥರಿಂದ ಏ.20ರಂದು ಚೆನ್ನಬಸವೇಶ್ವರಸ್ವಾಮಿ ರಥೋತ್ಸವ ಏರ್ಪಡಿಸಲಾಗಿದೆ. ಏ.19ರಂದು ಬೆಳಿಗ್ಗೆ 8ರಿಂದ 9ರ ಒಳಗೆ ಸ್ವಾಮಿಯವರ ಹೋಮಕುಂಡ ಪ್ರವೇಶ ನಂತರ ಮಹಾ ಮಂಗಳಾರತಿ, ಮ.12ಕ್ಕೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಮತ್ತು ಪ್ರಸಾದ, ರಾತ್ರಿ 10ಕ್ಕೆ ಜಾನಪದ ಕಾರ್ಯಕ್ರಮ ಇರುತ್ತದೆ. ಏ.20ರಂದು ಬೆಳಿಗ್ಗೆ 11ರಿಂದ 12 ಗಂಟೆಗೆ ಸ್ವಾಮಿಯವರ ರಥೋತ್ಸವ ಜರುಗುವುದು. ನಂತರ ಮಹಾಮಂಗಳಾರತಿ, ಮ.12ಕ್ಕೆ ಅನ್ನಸಂತರ್ಪಣೆ ಗ್ರಾಮಸ್ಥರಿಂದ ನಡೆಯುತ್ತದೆ. ರಾತ್ರಿ 8ಕ್ಕೆ ಮಂಟಪೋತ್ಸವ, ರಾತ್ರಿ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏ.21ರಂದು ಮ.12ಕ್ಕೆ ಅವಭೃತ ಸ್ನಾನ, ಓಕುಳಿ ಮತ್ತು ಮಹಾಮಂಗಳಾರತಿ, ಏ.22ರಂದು ಬೆ.10-30ಕ್ಕೆ ಸ್ವಾಮಿಯವರು ಬಾಳೆಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟಕ್ಕೆ ದಯ ಮಾಡಿಸುವರು. ಗಿರಿಯ ಮೇಲೆ ಪಂಚಾಭಿಷೇಕ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗಿಸಲಾಗುವುದು.