ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ 4 ನಾಮಪತ್ರ ತಿರಸ್ಕೃತ

Lingaraj Badiger
Updated On : 19 Apr 2013, 10:52 am

ಕಪ್ರವಾರ್ತೆ,ಚಿಕ್ಕಮಗಳೂರು, ಏ.18
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಲ್ಲಿಸಿರುವ ನಾಮಪತ್ರಗಳಲ್ಲಿ 4 ನಾಮಪತ್ರಗಳು ತಿರಸ್ಕೃತಗೊಂಡಿದ್ದು 73 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಮೂಡಿಗೆರೆ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಎಚ್. ಮಂಜುನಾಥ್, ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಣ್ಣಾವೇಲು, ಬಿಜೆಪಿಯ ಚಿಕ್ಕದೇವನೂರು ರವಿ, ಲೋಕಸತ್ತಾ ಪಕ್ಷದ ಶಂಕರಲಿಂಗೇಗೌಡ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಕ್ರಮಬದ್ಧವಾಗಿರುವ ನಾಮಪತ್ರಗಳ ಅಭ್ಯರ್ಥಿವಾರು ವಿವರ ಈ ಕೆಳಕಂಡಂತೆ  ಇದೆ.
ಚಿಕ್ಕಮಗಳೂರು ಕ್ಷೇತ್ರ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಪ್ಸರ್ ಪಾಶ, ಜನತಾದಳ (ಜಾತ್ಯಾತೀತ) ಎಸ್.ಎಲ್. ಧರ್ಮೇಗೌಡ, ಬಿಜೆಪಿಯಿಂದ ಸಿ.ಟಿ. ರವಿ, ಕಾಂಗ್ರೆಸ್‌ನ ಕೆ.ಎಸ್. ಶಾಂತೇಗೌಡ, ಹಿಂದೂಸ್ಥಾನ್ ನಿರ್ಮಾಣ ದಳದ ದ್ವಾರಕೀಶ್, ಕೆಜೆಪಿಯ ಕೆ.ಬಿ. ವೇದಮೂರ್ತಿ, ಭಾರತ ಕಮ್ಯೂನಿಸ್ಟ್ ಪಕ್ಷ (ಎಂ.ಎಲ್.) ಸುರೇಶ್, ಜನತಾದಳ(ಸಂಯುಕ್ತ)ದ ಟಿ. ಹರೀಶ್, ಪಕ್ಷೇತರ ಅಭ್ಯರ್ಥಿಗಳಾದ ಅಪ್ಸರ್ ಪಾಶಾ, ಡಿ.ಎಸ್. ಅಶೋಕ್, ಉದ್ದಪ್ಪ, ಬಿ.ಎಂ. ಕಲ್ಲೇಶ್ವರ್, ಯು.ಕೆ. ಗುರುಶಾಂತಪ್ಪ, ಧರ್ಮೇಗೌಡ, ಮುನಿಯ ಬೋವಿ, ರಮೇಶ್, ಕೆ. ರೇವಣ್ಣ, ವಿಜಯಕುಮಾರ್, ಎಂ.ಎಂ. ಸುಧೀರ್, ಸ್ನೇಕ್ ನರೇಶ್ ಕುಮಾರ್.
ಕಡೂರು ಕ್ಷೇತ್ರ: ಬಿಜೆಪಿಯ ಬೀರೂರು ದೇವರಾಜ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೆ.ಬಿ. ಮಲ್ಲಿಕಾರ್ಜುನ, ಜನತಾದಳ (ಜಾತ್ಯಾತೀತ)ದ ವೈ.ಎಸ್.ವಿ. ದತ್ತ, ಕೆಜೆಪಿ ಕೆ.ಎಸ್. ಪ್ರಕಾಶ್, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೆಂಪರಾಜು, ಲೋಕಸತ್ತ ಪಕ್ಷದ ಜಿ.ಎಂ. ಮಧು, ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಕುಮಾರ್ ನಾಯ್ಕ್,  ಪಕ್ಷೇತರ ಅಭ್ಯರ್ಥಿಗಳಾದ ಜಿ.ಕೆ. ಗಿರೀಶ್, ಕೆ.ಆರ್. ಗಂಗಾಧರಪ್ಪ, ಶಿವರುದ್ರಪ್ಪ, ಕೆ.ಹೆಚ್. ನಾಗರಾಜು ಹಾಗೂ ಟಿ. ಜನಾರ್ಧನ್ ರಾವ್.
ತರೀಕೆರೆ ಕ್ಷೇತ್ರ: ಬಿಜೆಪಿಯ ಅವಿನಾಶ್, ಕಾಂಗ್ರೆಸ್‌ನ ಜಿ.ಹೆಚ್. ಶ್ರೀನಿವಾಸ್, ಜನತಾದಳ (ಜಾತ್ಯಾತೀತ)ದ ಟಿ.ಆರ್. ನಾಗರಾಜ್, ಸಮಾಜವಾದಿ ಜನತಾ ಪಕ್ಷದ ಟಿ.ಎಸ್. ಜೀವರಾಜ್, ಕೆಜೆಪಿಯ ಡಿ.ಎಸ್. ಸುರೇಶ್, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೆ. ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷ ಡಿ.ಸಿ. ಸುರೇಶ್, ಪಕ್ಷೇತರ ಅಭ್ಯರ್ಥಿಗಳಾದ ಹೆಚ್.ಎಸ್. ನೀಲಕಂಠಪ್ಪ, ಬಿ.ಆರ್. ನೀಲಕಂಠಪ್ಪ, ಅನುಸೂಯಾ, ಎ. ಸುರೇಶ್, ಬಿ. ತಿಮ್ಮಯ್ಯ, ವಿ. ಜಯರಾಂ, ಕಾಂತರಾಜು, ಹೆಚ್.ಎಂ. ಗೋಪಿ, ತೀರ್ಥಪ್ಪ, ಡಿ.ಆರ್. ಪರಮೇಶ್ ನಾಯ್ಕ, ಜಿ. ಮಂಜುನಾಥ್, ಎ.ಆರ್.ಕೆ. ಶ್ರೀನಿವಾಸ್, ಮೆಹಬೂಬ್, ಹೆಚ್. ಓಂಕಾರಪ್ಪ, ಟಿ.ಎಸ್. ಸುರೇಶ್, ಹೆಚ್.ಪಿ. ಅಶೋಕ್.
ಶೃಂಗೇರಿ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಡಿ.ಎನ್. ಜೀವರಾಜ್, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ, ಜನತಾದಳ (ಜಾತ್ಯಾತೀತ)ದ ಟಿ.ಸಿ. ರಾಜೇಂದ್ರ, ಸಿಪಿಐ(ಎಂ.ಎಲ್)ರೆಡ್ ಸ್ಟಾರ್‌ನ ಉಮೇಶ, ಬಿ.ಎಸ್.ಆರ್. ಪಕ್ಷದ ಜಿ.ಆರ್. ಪೂರ್ಣೇಶ್, ಪಕ್ಷೇತರ ಅಭ್ಯರ್ಥಿಗಳಾದ ಅಬ್ರಾಮ್, ಕೆ.ಸಿ. ಪ್ರಕಾಶ್, ಸಿ.ಈ. ಬಸವರಾಜು ಹಾಗೂ ಕೆ.ವಿ. ಮಹೇಶ್ ಕುಮಾರ್.
ಮೂಡಿಗೆರೆ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಎಂ.ಪಿ. ಕುಮಾರಸ್ವಾಮಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ, ಜನತಾದಳ (ಜಾತ್ಯಾತೀತ)ದ ಬಿ.ಬಿ. ನಿಂಗಯ್ಯ, ಬಹುಜನ ಸಮಾಜಪಕ್ಷದ ಯು.ಬಿ. ಮಂಜಯ್ಯ, ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಾತಿ ಸುಂದರೇಶ್, ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ಸಿಸ್ಟ್ ಲೆನಿನಿಸ್ಟ್) ಕುಮಾರ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಕೆ. ಗೋಪಾಲ್, ನಂಜುಂಡ ಹಾಗೂ ರಮೇಶ್ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement