ರಾಜಿನಾಮೆಗೆ ಬಿಜೆಪಿ ಒತ್ತಾಯ
ತರೀಕೆರೆ: ಪಕ್ಷದ ಚಿನ್ಹೆಯಲ್ಲಿ ಚುನಾಯಿತರಾಗಿ ಇದೀಗ ಅನ್ಯ ಪಕ್ಷಗಳಲ್ಲಿ ಕೆಲಸ ಮಾಡುತ್ತಿರುವ ತರೀಕೆರೆ ತಾಲೂಕು ಜಿ.ಪಂ, ತಾ.ಪಂ. ಸದಸ್ಯರು ಕೂಡಲೇ ಪಕ್ಷಕ್ಕೆ ಮತ್ತು ತಂತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಬಿಜಿಪಿ ಪಕ್ಷದ ಮುಖಂಡರಾದ ಎನ್.ಮಂಜುನಾಥ್, ಆರ್.ದೇವಾನಂದ್ ಒತ್ತಾಯಿಸಿದ್ದಾರೆ.
ಪಕ್ಷದ ಕಾರ್ಯಾಲಯದಲ್ಲಿ ಏರ್ಪಾಡಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಎನ್.ಮಂಜುನಾಥ್ ಅವರು ಮಾತನಾಡಿ ಜಿ.ಪಂ.ತಾ.ಪಂ.ಸದಸ್ಯರ ಅವಧಿ ಇನ್ನೂ 24 ತಿಂಗಳಿಗೂ ಹೆಚ್ಚು ಇದೆ,
ಪಕ್ಷದಿಂದ ಚುನಾಯಿತ ಪ್ರತಿನಿಧಿಗಳು ಜಿ.ಪಂ.ಮತ್ತು ತಾ.ಪಂ.ಸದಸ್ಯರು ಚುನಾಯಿತ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಪಕ್ಷ ಕೂಡ ಅವರಿಗೆ ಷೋಕಾಸ್ ನೋಟೀಸ್ ನೀಡಿದೆ, ಆಯೋಗಕ್ಕೂ
ದೂರು ಸಲ್ಲಿಸಿದೆ, ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲು ಆಯೋಗಕ್ಕೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.
ಆರ್.ದೇವಾನಂದ್ ಅವರು ಮಾತನಾಡಿ ಪಕ್ಷದ ಚಿನ್ಹೆಯಡಿ ಪಕ್ಷದ ಕಾರ್ಯಕರ್ತರ ಶ್ರಮದಡಿ ಗೆದ್ದು ಇದೀಗ ಬೇರೆ ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಜಿ.ಪಂ.ಮತ್ತು ತಾ.ಪಂ.ಸದಸ್ಯರು ಕೂಡಲೇ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ.ಜಿ.ಸದಾನಂದ್, ಅಜಯ್ಕುಮಾರ್, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.