ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜ್ಯ ದುಸ್ಥಿತಿಗೆ ತಲುಪಿಸಿದವರಿಗೆ ತಕ್ಕಪಾಠ

Lingaraj Badiger
Updated On : 19 Apr 2013, 10:52 am

ಕಪ್ರವಾರ್ತೆ,ಮೂಡಿಗೆರೆ, ಏ.18
ಇವತ್ತಿಗೆ ರಾಜಕಾರಣಿಗಳನ್ನು ಕಂಡರೆ ಜನರು ಅಸಹ್ಯಪಡುವಂತಾಗಲು ಆಡಳಿತಾರೂಢರೇ ಕಾರಣರಾಗಿದ್ದು, ಕಳೆದ 5 ವರ್ಷದಲ್ಲಿ ರಾಜ್ಯವನ್ನು ದುಃಸ್ಥಿತಿಗೆ ತಲುಪಿಸಿದವರಿಗೆ ಜನಸಾಮಾನ್ಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಬಿ. ನಿಂಗಯ್ಯ ಹೇಳಿದರು.
   ಅವರು ಬುಧವಾರ ಅಡ್ಯಂತಾಯ ರಂಗಮಂದಿರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲಿದ್ದ ಯಾವ ಮುಖ್ಯಮಂತ್ರಿಯೂ ಜೈಲುಪಾಲಾಗಲಿಲ್ಲ. ರಾಜ್ಯದ ಸಂಪತ್ತುಗಳನ್ನು ಲೂಟಿ ಮಾಡಿದ ಸಾಧನೆ ಮಾತ್ರ ಬಿಜೆಪಿಯದ್ದಾಗಿದೆ ಎಂದು ದೂರಿದರು.
ಹೆಚ್ಚಿನ ಅಭಿವೃದ್ಧಿ: ಜೆಡಿಎಸ್ ಅಧಿಕಾರದಲ್ಲಿ ಹಿಂದಿನ ಯಾರೂ ಮಾಡದಿರುವ ಅಭಿವೃದ್ಧಿ ನಡೆದಿದೆ. ಮುಂದೆ ಅಧಿಕಾರ ದೊರೆತರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಜನಪರ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿದೆ ಎಂದ ಅವರು ಹೈಕಮಾಂಡ್ ಸಂಸ್ಕೃತಿಯಿಂದ ಕಾಂಗ್ರೆಸ್ ಸ್ಥಳೀಯರನ್ನು ಮರೆಯುತ್ತಿದೆ. ಪ್ರಾಮಾಣಿಕರನ್ನು ಕಡೆಗಣಿಸುತ್ತಿರುವ ಆ ಪಕ್ಷದಿಂದ ನಾಡಿನ ಅಭಿವೃದ್ಧಿ ಅಸಾಧ್ಯ ಎಂದರು.
  ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ ಮಾತನಾಡಿ, ಪಕ್ಷಕ್ಕೆ ಕ್ಷೇತ್ರದಲ್ಲಿ ವಿಶಾಲ ಸಂಘಟನೆ ಮತ್ತು ಶಕ್ತಿಯಿದೆ. ಬಡವರ ಹಣದಿಂದ ದರ್ಬಾರ್ ನಡೆಸಿದವರಿಗೆ ಉಳಿದಿರುವುದು ಮುಂದಿನ ದಿನಗಳಲ್ಲಿ ಪ್ರಾಯಶ್ಚಿತ್ತ ಪಟ್ಟುಕೊಳ್ಳುವುದೊಂದೇ ಮಾರ್ಗ ಎಂದರು.
   ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಅಡ್ಯಂತಾಯ ರಂಗ ಮಂದಿರಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ವಿವಿಧ ಪಕ್ಷಗಳನ್ನು ತ್ಯಜಿಸಿ ಬಂದವರನ್ನು ಸ್ವಾಗತಿಸಲಾಯಿತು.
 ಜಿಲ್ಲಾಧ್ಯಕ್ಷ ಮಂಜಪ್ಪ, ಬಾಲಕೃಷ್ಣೇಗೌಡ, ರಂಜನ್ ಅಜಿತ್ ಕುಮಾರ್, ಮೇಗೂರು ಜಗದೀಶ್, ಕೃಷ್ಣೇಗೌಡ, ಬಿ.ಎಲ್. ಸಂದೀಪ್, ವಿಶಾಲ ನಾಗರಾಜ್, ಸಿ.ಎಂ. ಗೋಪಾಲಗೌಡ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement