ಶೃಂಗೇರಿ ಬಳಿ ನಕ್ಸಲ ಕರಪತ್ರ ಪತ್ತೆ
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಬಳಿ ನಕ್ಸಲ್ ಕರಪತ್ರ, ಬ್ಯಾನರ್‌ಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ. ಕೆಲ್ಲಾರು ಬಳಿಯ ಮಾವಿನಕಟ್ಟೆ ಎಂಬಲ್ಲಿ ಪತ್ತೆಯಾದ ಬ್ಯಾನರ್ ಹಾಗೂ ಕರಪತ್ರಗಳಲ್ಲಿ ಚುನಾವಣೆ ಬಹಿಷ್ಕರಿಸೋಣ, ಪ್ರಜಾ ವಿಮೋಚನೆಗಾಗಿ ಶಸಸ್ತ್ರ ಹೋರಾಟ ಮುನ್ನೆಡೆಸೋಣ, ಮಾವೋವಾದಿ ಜಿಂದಾಬಾದ್ ಎಂದು ಬರೆಯಲಾಗಿದೆ. ಮತ್ತೊಂದು ಕರಪತ್ರದಲ್ಲಿ ರಾಜಕಾರಣಿಗಳು ಹಾಗೂ ಚುನಾವಣಾ ವ್ಯವಸ್ಥೆಯನ್ನು ಟೀಕಿಸಲಾಗಿದೆ. ಸುಮಾರು ಮೂರು ಪುಟಗಳುಳ್ಳ ಕರಪತ್ರಗಳು ಸಾಕಷ್ಟು ವಿವರಗಳನ್ನು ಒಳಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಡಿವೈಎಸ್ಪಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬ್ಯಾನರ್, ಕರಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧವಾಗಿ ತೀವ್ರ ತನಿಖೆ ನಡೆಸಲಾಗುತ್ತಿದ್ದು, ಸುತ್ತಮುತ್ತ ಪ್ರದೇಶಗಳಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.