ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆರ್ಥಿಕ ಹಿಂದುಳಿದ ಮಕ್ಕಳಿಗೆ ಉಚಿತ ಮುಂಜಿ

Lingaraj Badiger
Updated On : 20 Apr 2013, 10:59 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.19
ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ 150 ಮಕ್ಕಳ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ಗುರುವಾರ ನಡೆಯಿತು.
3 ದಿನಗಳ ಕಾಲ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆದ ಈ ಮುಂಜಿಯಲ್ಲಿ ವಿವಿದ ಮಕ್ಕಳು ಬಾಗವಹಿಸಿದ್ದು, ಉಪ್ಪಳ್ಳಿ ಶಾಂತಿನಗರದ ಮದರಸಾದಲ್ಲಿ ಸಮಾರೋಪ ಸಮಾರಂಭ ನೆರವೇರಿತು.
ಉಪ್ಪಳ್ಳಿ ಮಸೀದಿ ಧರ್ಮಗುರು ತ್ವಾಹಸಅದಿ ಅವರು, ಮಕ್ಕಳಿಗೆ ಹಣ್ಣು, ವಸ್ತ್ರ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಎನ್‌ಎಸ್‌ಎಫ್ ವತಿಯಿಂದ ಪ್ರಥಮ ಬಾರಿಗೆ ಈ ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಸಮುದಾಯದಲ್ಲಿ ಮುಂಜಿ ಕರ್ಮ ಕಡ್ಡಾಯವಾದ ಭಾದ್ಯತೆಯಾಗಿದೆ. ಜನಾಂಗದಲ್ಲಿ ಕೆಲವರು ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸಲಾಗದೆ ಕಡುಬಡತನದಲ್ಲಿ ಜೀವನ ನಡೆಸುತ್ತಿರುತ್ತಾರೆ, ಅಂತಹವರಿಗೆ ಸಹಕಾರಿಯಾಲೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಅಬೂಬಕರ್ ಮಾತನಾಡಿ, ಬಡ ಜನರನ್ನು ನೆನಪಿನಲ್ಲಿಟ್ಟುಕೊಂಡು, ಸಾರ್ವಜನಿಕ ಸೇವೆ ಗುರಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಎನ್‌ಎಸ್‌ಎಫ್ ಸಂಘಟನೆ, ಮಕ್ಕಳ ಆರೋಗ್ಯ ಮತ್ತು ಧಾರ್ಮಿಕತೆ ಕಾಪಾಡುವ ದೃಷ್ಟಿ ಹೊಂದಿ ಉಚಿತ ಮುಂಜಿ ಮಾಡಿಸಿದ್ದೇವೆ. ಶಾಫಿ, ಹನಫಿ ಎಂಬ ಭೇದ ತೊರೆದು ಬಡತನದಲ್ಲಿರುವ ಎಲ್ಲಾ ಮಕ್ಕಳನ್ನು ಗುರುತಿಸಿದ್ದೇವೆ. ಇದಕ್ಕೆ ಸಮಾಜದ ಕೆಲವು ಬಂಧುಗಳು ಸಹಕಾರ ನೀಡಿದ್ದು, ಸಂಘದ ಕಾರ್ಯಕರ್ತರು ಮುಖಂಡರ ಸಹಕಾರದಿಂದ ಯಶಸ್ಸು ಕಂಡಿದ್ದೇವೆಂದರು.
ಎಸ್‌ವೈಎಸ್ ಜಿಲ್ಲಾಧ್ಯಕ್ಷ ಯೂಸಫ್ ಹಾಜಿ, ಮುಖಂಡರಾದ ಅಬ್ದುಲ್ ಖಾದರ್, ಬದ್ರಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಹಾಜಿ, ಮುನೀರ್ ಅಹಮದ್, ಉಸ್ಮಾನ್ ಹಂಡುಗುಳಿ, ಸಫಾನ್, ಫಾರೂಕ್ ಮುಸ್ಲಿಯಾರ್ ಝುಹರಿ, ಡಾ. ಸೈಯದ್ ಮಹಮದ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement