ಜಾತಿಯ ಆಧಾರದ ಮೇಲೆ ಟಿಕೆಟ್; ಖಂಡನೆ
ಕಡೂರು: ಜಾತ್ಯತೀತ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು ವ್ಯಕ್ತಿಯ ಅರ್ಹತೆ ನಿರ್ಲಕ್ಷಿಸಿ ಜಾತಿಯ ಆಧಾರದ ಮೇಲೆ ಟಿಕೆಟ್ ನೀಡುವುದನ್ನು ಖಂಡಿಸಿ ಕ್ಷೇತ್ರದ ಸಣ್ಣ ಸಮುದಾಯಗಳು ಒಂದಾಗಬೇಕು ಎಂದು ಪಕ್ಷೇತರ ಅಭ್ಯರ್ಥಿ ಜಿ.ಕೆ. ಗಿರೀಶ್ ಉಪ್ಪಾರ್ ಹೇಳಿದರು.
ರಾಮನವಮಿ ಮಹೋತ್ಸವ ನಡೆದ ಪಟ್ಟಣದ ಪೇಟೆಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಜಾತ್ಯತೀತ ಮತ್ತು ಸೈದ್ದಾಂತಿಕ ತಳಹದಿಯ ಮೇಲೆ ನಮ್ಮ ಪಕ್ಷಗಳು ನಿಂತಿವೆ ಎಂದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷಗಳು ಕೇವಲ ಜಾತಿ ಅಳೆಯುವ ಮೂಲಕ ಟಿಕೆಟ್ ನೀಡುತ್ತಿರುವುದು ದುರಂತ ಎಂದರು.
ಬ್ಯಾಗಡೇಹಳ್ಳಿ ಶಾಂತಕುಮಾರ್, ಮಲ್ಲಪ್ಪ, ಶ್ರೀನಿವಾಸ್, ಕೃಷ್ಣಮೂರ್ತಿ,ನಾಗರಾಜು, ಜಿ.ಕೆ. ಸುಂದರೇಶ್, ನರಂಸಿಂಹಮೂರ್ತಿ, ಶೇಷಪ್ಪ, ರಂಗನಾಥ್, ಸುರೇಶ್, ಭೈರೇಶ್ ಇದ್ದರು.