ಶ್ರೀ ಸ್ವರ್ಣಾಂಬ ದೇವಿಯ ಬ್ರಹ್ಮ ರಥೋತ್ಸವ
ಕಡೂರು: ಸಮೀಪದ ಮಲ್ಲೇಶ್ವರ ಶ್ರೀ ಸ್ವರ್ಣಾಂಬ ದೇವಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣಾಂಬ ದೇವಿ ಜಾತ್ರೆ ಕಳೆದ ಮಂಗಳವಾರದಿಂದ ಆರಂಭಗೊಂಡಿದ್ದು, ರಾಮನವಮಿಯ ಶುಭ ಶುಕ್ರವಾರ ಬೆಳಿಗ್ಗೆ ಸನ್ನಿಧಿಯಲ್ಲಿರುವ ಶ್ರೀರಾಮದೇವರಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರ ಶ್ರೀ ಸ್ವರ್ಣಾಂಬ ದೇವಿಗೆ ಅಭಿಷೇಕ, ನಿತ್ಯಪೂಜೆ, ಅರ್ಚನೆ ಮತ್ತು ಗಜಾರೋಹಣೋತ್ಸವ, ಶ್ರೀ ಕನ್ಯಕಾ ಪೂಜೆ, ಪುರಸ್ಸರ ಕಲ್ಯಾಣೋತ್ಸವ ನಡೆದು 12 ಗಂಟೆ ನಂತರ ಉತ್ಸವ ಹೊರಟ ಶ್ರೀ ಸ್ವರ್ಣಾಂಬ ದೇವಿ ದೇವಾಲಯದ ಸುತ್ತ ನೆರಿದಿದ್ದ ಸಾವಿರಾರು ಭಕ್ತರಿಂದ ಕುಂಕುಮ ಸೇವೆ ಮಾಡಿಸಿಕೊಂಡು ದರ್ಶನ ನೀಡಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಡು ಬಿಸಿಲನ್ನು ಲೆಕ್ಕಿಸದೆ ದೂರದ ಊರುಗಳಿಂದ ಆಗಮಿಸಿದ್ದ ಭಕ್ತ ಸಮೂಹ ರಥೋತ್ಸವದಲ್ಲಿ ಭಾಗವಹಿಸಿ ದರ್ಶನ ಪಡೆದರು.
--