ಶ್ರೀರಾಮನವಮಿ ಸಂಗೀತೋತ್ಸವ
ತರೀಕೆರೆ: ಪಟ್ಟಣದ ಶ್ರೀರಾಮ ಸೇವಾ ಪ್ರತಿಷ್ಠಾನ, ಶ್ರೀರಾಮ ಬಡಾವಣೆ ವತಿಯಿಂದ ಶುಕ್ರವಾರ ಶ್ರೀರಾಮ ಮಂದಿರದಲ್ಲಿ 83ನೇ ವರ್ಷದ ಶ್ರೀರಾಮ ನವಮಿ ಸಂಗೀತೋತ್ಸವ ಮತ್ತು ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀ ಹನುಮತ್ಸಮೇತ ಶ್ರೀರಾಮದೇವರಿಗೆ ಅಭಿಷೇಕ ಮಹಾ ಮಂಗಳಾರತಿ ಶ್ರೀ ರಾಮಾಯಣ ಪಾರಾಯಣ, ಶ್ರೀನಿಧಿ, ಶ್ರೀವಾರಿ ಭಜನಾ ಮಂಡಳಿಯವರಿಂದ ಭಜನೆ ಮತ್ತು ಪ್ರತಿಷ್ಠಾನದ ವತಿಯಂದ ದೀಪ್ತಿ ಚಿನಿವಾರ್ ಅವರಿಂದ ವೀಣಾವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಲಾವಿದ ಶ್ರೀನಿವಾಸ್, ಸಾಯಿಕುಮಾರ್ ಪಕ್ಕವಾದ್ಯ ನುಡಿಸಿದರು. ಲೀಲಾ ಸಾಯಿಕುಮಾರ್, ಲತಾ ಗೋಪಾಲಕೃಷ್ಣ, ಇದ್ದರು.
ಮೇ12ಕ್ಕೆ ನೆಮ್ಮಾರ್ ಉರೂಸ್
ಶೃಂಗೇರಿ: ಇಲ್ಲಿನ ನೆಮ್ಮಾರು ಹಜರತ್ ದಿಲಾವರುಷ ಔಲಿಯಾ ದರ್ಗಾದಲ್ಲಿ ಮೇ 12 ರಂದು ವಿಶೇಷ ಉರೂಸ್ ಸಮಾರಂಭ ನಡೆಯಲಿದೆ. ಸಂಜೆ 5 ಗಂಟೆಗೆ ಆಕರ್ಷಕ ಝರಬಾ ಕಾರ್ಯಕ್ರಮದೊಂದಿಗೆ ದರ್ಗಾದ ಮುಂಬಾಗದಿಂದ ಸಂದಲ್ ಮೆರವಣಿಗೆ ಹೊರಡಲಿದೆ. ಮುಖ್ಯ ಬೀದಿಯಲ್ಲಿ ಸಾಗಿ ನಂತರ ಸಂಜೆ 6 ಗಂಟೆಯಿಂದ ದರ್ಗಾದಲ್ಲಿ ವಿಶೇಷ ದುವಾ ಕಾರ್ಯಕ್ರಮ ನೆರವೇರಲಿದೆ.
ಶಿಕ್ಷಕರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ
ಶೃಂಗೇರಿ: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ನಿರತ ಶಿಕ್ಷಕರಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಶಿಕ್ಷಕರು ಪದವಿ ಹಾಗೂ ವಿಜ್ಞಾನ ಪದವಿ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಶಿಕ್ಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.