ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹೈಕಮಾಂಡ್ ನಿರ್ಣಯ ಸಮರ್ಥನೀಯ'

Lingaraj Badiger
Updated On : 20 Apr 2013, 10:50 am

ಮೂಡಿಗೆರೆ: ಅವಕಾಶಕ್ಕಾಗಿ ಹೆಣಗಾಡಿ ವಿವಿಧ ಪಕ್ಷಗಳನ್ನು ಬದಲಿಸಿ ಸ್ವಾರ್ಥಪರ ರಾಜಕೀಯ ನಡೆಸುತ್ತಿರುವ ನಿಂಗಯ್ಯರಿಗೆ ಅರ್ಹತೆ ಇಲ್ಲದಿರುವುದನ್ನು ಗಮನಿಸಿರುವ ಹೈಕಮಾಂಡ್, ಕ್ಷೇತ್ರದ ಜನರು ಹಾಗೂ ಪಕ್ಷದೊಂದಿಗೆ ನಿಷ್ಠೆಯುಳ್ಳ ಬಿ.ಎನ್. ಚಂದ್ರಪ್ಪರನ್ನು ಕಣಕ್ಕಿಳಿಸಿ ಉತ್ತಮ ನಿರ್ಣಯ ಕೈಗೊಂಡಿದೆ ಎಂದು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಹೇಳಿದ್ದಾರೆ.
 ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮಾತನಾಡುವ ನೈತಿಕತೆ ನಿಂಗಯ್ಯರಿಗಿಲ್ಲ. ಅವರು ಸಮಯ ಸಾಧಕ ರಾಜಕೀಯ ನಡೆಸುತ್ತಿದ್ದು, ತಮಗೆ ಲಾಭವಾಗುವ ಮಾರ್ಗ ಕಂಡರೆ ಯಾವುದೇ ಪಕ್ಷವನ್ನು ಬದಲಿಸಲು ಸಿದ್ಧರಿರುವುದನ್ನು ಅನೇಕ ಸಲ ತೋರಿಸಿದ್ದಾರೆ ಎಂದು ಟೀಕಿಸಿದರು.
3-4 ದಿನಗಳ ಹಿಂದೆ ಕಾಂಗ್ರೆಸ್‌ನಲ್ಲಿದ್ದ ನಿಂಗಯ್ಯ ಜೆಡಿಎಸ್ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಟೀಕಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಮುಖವಾಗಿ ಬೇಕಿರುವ ಅರ್ಹತೆ ಇಲ್ಲದಿರುವ ಅವರಿಗೆ ಒಂದು ವೇಳೆ ಪಕ್ಷವು ಟಿಕೆಟ್ ನೀಡಿದ್ದರೆ ಹೊಗಳು ಭಟ್ಟರಾಗಿ ಬಿಡುತ್ತಿದ್ದರೇನೋ. ಆದರೆ ಕಾಂಗ್ರೆಸ್ ಟಿಕೆಟ್ ಪಡೆಯಲು ವಿಫಲವಾಗಿರುವ ಅವರು, ಹತಾಶ ಭಾವನೆಯಿಂದ ಬಡಬಡಿಸುತ್ತಿದ್ದಾರೆ ಎಂದು ದೂರಿದರು.
 ಕ್ಷೇತ್ರದಲ್ಲಿ ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದೆ. ಪಕ್ಷವನ್ನು ಗೆಲ್ಲಿಸುವ ಪ್ರಮಾಣದ ಮತಗಳು ನಮ್ಮಲ್ಲಿವೆ. ಕ್ಷೇತ್ರವದರೇ ಆಗಿರುವ ಮೋಟಮ್ಮ, ಬಿ.ಎಲ್. ಶಂಕರ್, ತಾರದೇವಿ ಸಿದ್ಧಾರ್ಥ, ಡಿ.ಎಂ. ಪುಟ್ಟೇಗೌಡರಂತಹ ಘಟಾನುಘಟಿಗಳು ರಾಜ್ಯ ಮಟ್ಟದ ನಾಯಕರಿರುವುದರಿಂದ ಕ್ಷೇತ್ರದಲ್ಲಿ ಪಕ್ಷವು ಬಲಿಷ್ಠ ಶಕ್ತಿಯಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement