25ರಂದು ಜಿಲ್ಲೆಗೆ ಸೋನಿಯಾ
ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಏ.25 ರಂದು ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರಿಗೆ ಆಗಮಿಸಲಿರುವ ಅವರು, ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ವಕ್ತಾರ ಮಹೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಭಾಷಣ ಮಾಡಲಿದ್ದಾರೆ. ನಂತರ ಮಂಗಳೂರಿಗೆ ತೆರಳಲಿದ್ದಾರೆ ಎಂದು ಹೇಳಿದರು.
ಇಂದಿನಿಂದ ಜೆಡಿಎಸ್ ಪ್ರಚಾರ
ಮೂಡಿಗೆರೆ: ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯರವರು ಏ.21ರಿಂದ ಮೇ 1ರ ವರೆಗೆ ತಾಲೂಕಿನ ಪ್ರತಿ ಹೋಬಳಿಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಕ್ಷೇತ್ರಾಧ್ಯಕ್ಷ ಉಮಾಪತಿ ತಿಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಏ.21ರಂದು ಬಾಳೂರು ಹೋಬಳಿ, 22.ಆವತಿ, 23.ಅಂಬಳೆ, 24.ಮೂಡಿಗೆರೆ ಕಸಬಾ, 25.ಗೋಣಿಬೀಡು,26.ಮೂಡಿಗೆರೆ ಕಸಬಾ, 27.ಆಲ್ದೂರು, 28.ಕಳಸ, 29.ಬಣಕಲ್, 30.ವಸ್ತಾರೆ. ಮೇ1ರಂದು ಆಲ್ದೂರು ಹಾಗೂ ಗೋಣಿಬೀಡು, 2.ಕಳಸ ಮತ್ತು ಬಣಕಲ್ನಲ್ಲಿ ಪ್ರವಾಸ ಮಾಡಲಿದ್ದಾರೆಂದು ತಿಳಿಸಿದ್ದಾರೆ.