ಗಿರೀಶ್ ಜಿ. ಉಪ್ಪಾರ್ ಜೆಡಿಎಸ್ ಸೇರ್ಪಡೆ
ಕಡೂರು: ಏಕತೆ, ಬದ್ಧತೆ ಮತ್ತು ವಿಶ್ವಾಸ ಬೆಳೆಸುವ ಹಿಂದುಳಿದ ಸಮುದಾಯವಾದ ಉಪ್ಪಾರ ಸಮುದಾಯಕ್ಕೆ ಎಲ್ಲಾ ರೀತಿಯ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂಬ ನಿಟ್ಟಿನಲ್ಲಿ ನನಗೆ ಹೆಗಲು ಕೊಟ್ಟಿರುವ ಈ ಸಮುದಾಯ ನೀಡುತ್ತಿರುವ ಬೆಂಬಲಕ್ಕೆ ಆಭಾರಿಯಾಗಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಉಪ್ಪಾರ ಸಮುದಾಯದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ನಾಮಪತ್ರ ವಾಪಸ್ ಪಡೆದ ಗಿರೀಶ್ ಜಿ. ಉಪ್ಪಾರ್ ಅವರನ್ನು ಜೆಡಿಎಸ್ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪ್ಪಾರ ಸಮುದಾಯದ ಒಗ್ಗಟಿನ ಮೇಲೆ ನಂಬಿಕೆಯಿಟ್ಟು ಇಂದು ನನಗೆ ಪ್ರೋತ್ಸಾಹ ನೀಡಿದೆ ಎಂದರು.
ಜೆಡಿಎಸ್ ಮುಖಂಡ ವೈ.ಎಸ್. ರವಿಪ್ರಕಾಶ್ ಮಾತನಾಡಿದರು. ಪಕ್ಷ ಸೇರ್ಪಡೆಯಾದ ಗಿರೀಶ್ ಮಾತನಾಡಿ, ದತ್ತರವರು ಉಪ್ಪಾರ ಸಮುದಾಯ ಜೊತೆ ಹೊಂದಿರುವ ಉತ್ತಮ ಒಡನಾಟ ಜನರಿಗೆ ಸ್ಪಂದಿಸುವ ಗುಣ ಮತ್ತು ಅವರ ಜಾತ್ಯತೀತ ನಿಲವನ್ನು ಮೆಚ್ಚಿ ನಾನು ಸಂತೋಷದಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೇನೆ ಎಂದರು.
ಮುಖಂಡ ನರಸಿಂಹಮೂರ್ತಿ, ಕಲ್ಗುಂಡಿ ಶ್ರೀಧರ್, ಜಿಗಣೇಹಳ್ಳಿ ನೀಲಕಂಠಪ್ಪ, ಶೇಷಪ್ಪ, ಬಿ.ಟಿ. ಗಂಗಾಧರನಾಯ್ಕ, ಡಿ. ಪ್ರಶಾಂತ್, ಪಾತೇನಹಳ್ಳಿ ಚೌಡಪ್ಪ, ಬಸವರಾಜು ಮೊದಲಾದವರು ಉಪಸ್ಥಿತರಿದ್ದರು.