ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ 56 ಅಭ್ಯರ್ಥಿಗಳು

Rashmi Kasaragodu
Updated On : 21 Apr 2013, 12:48 pm

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಏ.20
ಬರುವ ಮೇ 5 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ 14 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿದ್ದು, ಇದೀಗ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 56 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಡಿ.ಎಸ್. ಅಶೋಕ್, ಬಿ.ಎಂ. ಕಲ್ಲೇಶ್ವರ್, ರಮೇಶ್, ವಿಜಯಕುಮಾರ್. ಕಡೂರು ವಿಧಾನಸಭಾ ಕ್ಷೇತ್ರದಿಂದ ಜಿ.ಕೆ. ಗಿರೀಶ್, ಶಿವರುದ್ರಪ್ಪ, ಟಿ. ಜನಾರ್ದನ್ ರಾವ್, ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಅನುಸೂಯಾ, ಹೆಚ್. ಓಂಕಾರಪ್ಪ, ಕಾಂತರಾಜು, ಬಿ. ತಿಮ್ಮಯ್ಯ, ಮೆಹಬೂಬ್, ಜಿ. ಮಂಜುನಾಥ್, ಎ.ಆರ್.ಕೆ. ಶ್ರೀನಿವಾಸ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಚುನಾವಣಾ ಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇದೆ.
ಚಿಕ್ಕಮಗಳೂರು: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಪ್ಸರ್ ಪಾಶ, ಜನತಾದಳ (ಜಾತ್ಯಾತೀತ)ದ ಎಸ್.ಎಲ್. ಧರ್ಮೇಗೌಡ,  ಬಿಜೆಪಿಯಿಂದ ಸಿ.ಟಿ. ರವಿ, ಕಾಂಗ್ರೆಸ್‌ನಿಂದ ಕೆ.ಎಸ್. ಶಾಂತೇಗೌಡ,  ಹಿಂದೂಸ್ಥಾನ್ ನಿರ್ಮಾಣ ದಳದ ದ್ವಾರಕೀಶ್, ಕೆಜೆಪಿಯಿಂದ ಕೆ.ಬಿ. ವೇದಮೂರ್ತಿ, ಭಾರತ ಕಮ್ಯೂನಿಸ್ಟ್ ಪಕ್ಷ (ಎಂ.ಎಲ್.) ರೆಡ್‌ಸ್ಟಾರ್ ಸುರೇಶ್, ಜನತಾದಳ (ಸಂಯುಕ್ತ)ದ ಟಿ. ಹರೀಶ್, ಪಕ್ಷೇತರ ಅಭ್ಯರ್ಥಿಗಳಾದ ಅಪ್ಸರ್ ಪಾಷ, ಯು.ಕೆ. ಗುರುಶಾಂತಪ್ಪ, ಧರ್ಮೇಗೌಡ, ಮುನಿಯ ಬೋವಿ, ಕೆ. ರೇವಣ್ಣ, ಎಂ.ಎಂ. ಸುಧೀರ್, ಸ್ನೇಕ್ ನರೇಶ್ ಕುಮಾರ್.
ಕಡೂರು: ಬಿಜೆಪಿಯಿಂದ ಬೀರೂರು ದೇವರಾಜ್, ಕಾಂಗ್ರೆಸ್‌ನಿಂದ ಕೆ.ಬಿ. ಮಲ್ಲಿಕಾರ್ಜುನ, ಜನತಾದಳ (ಜಾತ್ಯಾತೀತ)ದ ವೈ.ಎಸ್.ವಿ. ದತ್ತ, ಕೆಜೆಪಿಯಿಂದ ಕೆ.ಎಸ್. ಪ್ರಕಾಶ್, ಬಿ.ಎಸ್.ಆರ್. ಕಾಂಗ್ರೆಸ್‌ನ ಕೆಂಪರಾಜು, ಲೋಕಸತ್ತ ಪಾರ್ಟಿಯ ಜಿ.ಎಂ. ಮಧು, ವೆಲ್‌ಫೇರ್ ಪಕ್ಷದ ಆಫ್ ಇಂಡಿಯಾದ ಬಿ.ಟಿ. ಕುಮಾರ್ ನಾಯ್ಕ್, ಪಕ್ಷೇತರ ಅಭ್ಯರ್ಥಿಗಳಾದ ಕೆ.ಆರ್. ಗಂಗಾಧರಪ್ಪ ಹಾಗೂ ಕೆ.ಹೆಚ್. ನಾಗರಾಜು.
ತರೀಕೆರೆ: ಟಿ.ಜೆ. ಅವಿನಾಶ್ (ಬಿಜೆಪಿ), ಜನತಾದಳ (ಜಾತ್ಯಾತೀತ)ದ ಟಿ.ಆರ್. ನಾಗರಾಜ್, ಜಿ.ಎಚ್. ಶ್ರೀನಿವಾಸ್ (ಕಾಂಗ್ರೆಸ್),  ಸಮಾಜವಾದಿ ಜನತಾ ಪಕ್ಷದ ಟಿ.ಎಸ್. ದೇವರಾಜ್,
ಬಿ.ಎಸ್.ಆರ್. ಕಾಂಗ್ರೆಸ್‌ನ ಕೆ. ಮಂಜುನಾಥ್, ಡಿ.ಎಸ್. ಸುರೇಶ್ (ಕೆಜೆಪಿ), ಸರ್ವೋದಯ ಕರ್ನಾಟಕ ಪಕ್ಷ ಡಿ.ಸಿ. ಸುರೇಶ್, ಪಕ್ಷೇತರ ಅಭ್ಯರ್ಥಿಗಳಾದ ಹೆಚ್.ಪಿ. ಅಶೋಕ್, ಹೆಚ್.ಎಂ. ಗೋಪಿ, ವಿ. ಜಯರಾಮು, ತೀರ್ಥಪ್ಪ, ಬಿ.ಆರ್. ನೀಲಕಂಠಪ್ಪ, ಎಚ್.ಎಸ್. ನೀಲಕಂಠಪ್ಪ, ಬಿ.ಆರ್. ಪರಮೇಶ್ ನಾಯ್ಕ, ಎ. ಸುರೇಶ್, ಟಿ.ಎಸ್. ಸುರೇಶ್.
ಶೃಂಗೇರಿ: ಡಿ.ಎನ್. ಜೀವರಾಜ್ (ಬಿಜೆಪಿ), ಟಿ.ಡಿ. ರಾಜೇಗೌಡ (ಕಾಂಗ್ರೆಸ್), ಜನತಾದಳ (ಜಾತ್ಯಾತೀತ)ದ ಟಿ.ಸಿ.
ರಾಜೇಂದ್ರ, ಸಿಪಿಐ (ಎಂ.ಎಲ್.) ರೆಡ್‌ಸ್ಟಾರ್ ಉಮೇಶ, ಬಿ.ಎಸ್.ಆರ್. ಪಕ್ಷದ ಜಿ.ಆರ್. ಪೂರ್ಣೇಶ್, ಪಕ್ಷೇತರ ಅಭ್ಯರ್ಥಿಗಳಾದ ಅಬ್ರಾಹಾಮ್, ಕೆ.ಸಿ. ಪ್ರಕಾಶ್ ಹಾಗೂ ಕೆ.ವಿ. ಮಹೇಶ್ ಕುಮಾರ್.
ಮೂಡಿಗೆರೆ: ಎಂ.ಪಿ. ಕುಮಾರಸ್ವಾಮಿ (ಬಿಜೆಪಿ), ಬಿ.ಎನ್. ಚಂದ್ರಪ್ಪ (ಕಾಂಗ್ರೆಸ್), ಜನತಾದಳ (ಜಾತ್ಯಾತೀತ)ದ ಬಿ.ಬಿ. ನಿಂಗಯ್ಯ, ಬಹುಜನ ಸಮಾಜಪಕ್ಷದ ಯು.ಬಿ. ಮಂಜಯ್ಯ, ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಾತಿ ಸುಂದರೇಶ್, ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ಸಿಸ್ಟ್ ಲೆನಿನಿಸ್ಟ್)ದ ಕುಮಾರ, ಪಕ್ಷೇತರ ಅಭ್ಯರ್ಥಿಗಳಾದ ನಂಜುಂಡ ಹಾಗೂ ಬಿ.ಎಂ. ರಮೇಶ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement