ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಪರ ಹೋರಾಟ ಬೆಂಬಲಿಸಲು ನೀಲಕಂಠಪ್ಪ ಮನವಿ

Rashmi Kasaragodu
Updated On : 21 Apr 2013, 12:49 pm

ತರೀಕೆರೆ: ಮೊದಲಿನಿಂದಲೂ ಜನಪರ ಹೋರಾಟ ಮಾಡಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದೇನೆ. ಇದೀಗ ಬರಲಿರುವ ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಕ್ಷೇತ್ರದ ಜನರು ತಮ್ಮನ್ನು ಗೆಲ್ಲಿಸುವುದರ ಮೂಲಕ ಮತ್ತೊಮ್ಮೆ ಜನಪರ ಹೋರಾಟ ಬೆಂಬಲಿಸಬೇಕೆಂದು ಮಾಜಿ ಶಾಸಕರು, ಮುಖಂಡರಾದ ಬಿ.ಆರ್. ನೀಲಕಂಠಪ್ಪ ಮನವಿ ಮಾಡಿದ್ದಾರೆ.
ಅವರು ಶನಿವಾರ ತಮ್ಮ ನಿವಾಸದಲ್ಲಿ ಏರ್ಪಾಡುಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಆಶಾವಾದಿ. ಯಾವುದೇ ಸರ್ಕಾರವಿದ್ದರೂ ಜನಪ್ರತಿನಿಧಿಗಳ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಬಗ್ಗೆ ಧ್ವನಿ ಎತ್ತಿ ಹೋರಾಟ ಮಾಡಿದ್ದೇನೆ. ನಾನು ಆಶಾವಾದಿ. ಕಾಂಗ್ರೆಸ್‌ನಿಂದ ಅವಕಾಶ ಕೊಡಿ ಎಂದು ಪಕ್ಷದ ಸ್ಥಳೀಯ,  ವರಿಷ್ಟರಲ್ಲಿ ತಾವು ಎಷ್ಟು ಪ್ರಯತ್ನಿಸಿದರೂ ತಮಗೆ ಕಾಂಗ್ರೆಸ್‌ನಿಂದ ಅವಕಾಶ ಕೊಡಲಿಲ್ಲ ಎಂದರು.
ಕಟ್ಟಕಡೆಯ ಸ್ಪರ್ಧೆ: ಪಕ್ಷ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಇದು ನನ್ನ ಕಟ್ಟಕಡೆಯ ಸ್ಪರ್ಧೆ. ಸರ್ವರನ್ನೂ ಒಟ್ಟುಗೂಡಿಸಲು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದೇನೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement