ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್ ಎಸ್ಸಿ, ಎಸ್ಟಿ ಯುವ ಘಟಕದ ಸಭೆ

Rashmi Kasaragodu
Updated On : 21 Apr 2013, 12:51 pm

ಮೂಡಿಗೆರೆ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ತಾಲೂಕಿನ ಎಸ್ಸಿಎಸ್ಟಿ ಯುವ ಘಟಕದ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಅವರಿಗೆ ಪ್ರತಿ ಕಾಲೋನಿಗಳಿಗೆ ತೆರಳಿ 5ರಿಂದ 10 ಜನರ ತಂಡ ರಚಿಸಲು ಮಾರ್ಗದರ್ಶನ ನೀಡಲಾಯಿತು.
ಈ ವೇಳೆ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಮಾತನಾಡಿ, ಹಣ ಹೆಂಡಕ್ಕೆ ತಮ್ಮ ಅಮೂಲ್ಯ ಮತ ಮಾರಾಟ ಮಾಡಿಕೊಂಡು ಗುಲಾಮರಂತೆ ಬದುಕಬಾರದು. ಕಳ್ಳರು, ಅಪ್ರಾಮಾಣಿಕರು, ಭ್ರಷ್ಟಾಚಾರಿಗಳಿಗೆ ಮತ ನೀಡಿ ಪ್ರೋತ್ಸಾಹ ನೀಡದೆ, ವಿವೇಚನೆ ಮಾಡಿ ಉತ್ತಮರನ್ನು ಆಯ್ಕೆ ಮಾಡುವುದರ ಮೂಲಕ ಸಮಾಜದ, ಕ್ಷೇತ್ರದ, ರಾಜ್ಯದ ಒಳಿತಿಗೆ, ಅಭಿವೃದ್ಧಿಗಾಗಿ ಮತದಾರರು ಜೆಡಿಎಸ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.
 ವಿವಿಧ ಪಕ್ಷದ ಕಾರ್ಯಕರ್ತರಾದ ಉಗ್ಗೆಹಳ್ಳಿ ಗಿರಿ, ನೇಮರಾಜ್ ಹಾಗೂ ಅವರ ಬೆಂಬಲಿಗರು. ಎಬಿವಿಪಿಯ ಬಾನಳ್ಳಿ ಸಚಿನ್, ಕೌಶಿಕ್ ಹಾಗೂ ಬೆಂಬಲಿಗರು ಜೆಡಿಎಸ್‌ಗೆ ಸೇರ್ಪಡೆಗೊಂಡರು.  ಅವರಿಗೆ ಪಕ್ಷದ ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ, ಹಿರಿಯ ಮುಖಂಡ ಬಾಲಕೃಷ್ಣಗೌಡ ಪಕ್ಷದ ಧ್ವಜ ನೀಡುವುದರ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.
ಜೆಡಿಎಸ್ ಮುಖಂಡರಾದ ರಂಜನ್ ಅಜಿತ್ ಕುಮಾರ್, ಗೋಪಾಲಗೌಡ, ಬಾಳೂರು ಅಜಿತ್ ಕುಮಾರ್, ಬಿ.ಎಲ್. ಸಂದೀಪ್, ಜಿ.ಎಲ್. ಉಪೇಂದ್ರ, ಮಾಕೋನಹಳ್ಳಿ ರಮೇಶ್, ಮಗ್ಗಲಮಕ್ಕಿ ರವಿ, ವಕ್ತಾರ ಚಂದ್ರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement