ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ಗಿರೀಶ್

Rashmi Kasaragodu
Updated On : 21 Apr 2013, 12:49 pm

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಏ.20
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನ ಸನ್ನದ್ದಾರಾಗಿದ್ದಾರೆಂದು ಎಚ್‌ಡಿಕೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಹೇಳಿದ್ದಾರೆ.
ಕೊಳಗಾಮೆ, ಹುಲುವತ್ತಿ, ಉಕ್ಕುಡ, ಮುತ್ತೋಡಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡರ ಪರ ಶನಿವಾರ ಮತಯಾಚನೆ ಮಾಡಿ ಜಾಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹಗರಣಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕೇಂದ್ರದ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಹೋದಯರು ಮತ್ತು ಭೂಮಿ ಬಗೆದು ಅಕ್ರಮ ಮಾಡುವ ಮೂಲಕ ಸಾರ್ವಜನಿಕರ ಹಣದಲ್ಲಿ ಆಕಾಶಯಾನದಲ್ಲಿ ತೇಲುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರದ ಮಂತ್ರಿಗಳು ಜೈಲು ಸೇರಿದ್ದಾರೆ. ಇದೇ ಸಾಲಿಗೆ ಸೇರಲು ನಮ್ಮ ಸಚಿವರು ಸಿದ್ದರಾಗಬೇಕಾಗಿದ್ದು ಈ ಕ್ಷೇತ್ರದಲ್ಲಿನ ಮತದಾರರು ರವಿಯವರಿಗೆ ಭ್ರಷ್ಟಾಚಾರದ ಕೊಡುಗೆ ನೀಡಿ ಜೆಡಿಎಸ್ ಅಭ್ಯರ್ಥಿ ಧರ್ಮೇಗೌಡರಿಗೆ ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಜಾಗರ ಹೋಬಳಿ ಉಪಾಧ್ಯಕ್ಷ ಎಲೆನ್ ಲೋಬೋ ಮಾತನಾಡಿ, ಜನಸೇವೆ ಉದ್ದೇಶ ಹೊಂದಿ ಮೂರು ಬಾರಿ ಶಾಸಕರಾಗಿದ್ದ ಎಸ್.ಆರ್. ಲಕ್ಷ್ಮಯ್ಯನವರ ನೇರ ನುಡಿ ಸ್ವಭಾವದಿಂದ ಬಡ ಜನರಿಗೆ ಸ್ಪಂದಿಸಿ ಜನಮನ್ನಣೆಗಳಿಸಿದ್ದರು.
ಅದೇ ರೀತಿ ಧರ್ಮೇಗೌಡರು ಸಹಕಾರಿ ಕ್ಷೇತ್ರದಿಂದ ಪಟ್ಟಣ ಪಂಚಾಯಿತಿ ಮೂಲಕ ರೈತರು, ಕೃಷಿಕರು ಸಾಮಾನ್ಯ ಜನರ ನಾಡಿಮಿಡಿತವನ್ನು ಅರ್ಥೈಸಿಕೊಂಡು ಬೀರೂರು ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ತಮ್ಮಗಳ ಆಶೀರ್ವಾದದಿಂದ ಪುನರಾಯ್ಕೆಯಾಗುವ ನಿರೀಕ್ಷೆಯಲ್ಲಿದ್ದು ತಮ್ಮ ಬೆಂಬಲ ಅಗತ್ಯ ಎಂದರು.
ಮುಖಂಡರಾದ ಹರೀಶ್, ಚೇತನ, ನಂದೀಶ್, ಸಿರಿಲ್ ಲೋಬೋ, ದೀಕ್ಷೀತ್ ಗೌಡ, ಕೃಷ್ಣೇಗೌಡ, ಈರೇಗೌಡ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement