'ಬಿಜೆಪಿಯಿಂದ ವ್ಯಾಪಕ ಭ್ರಷ್ಟಾಚಾರ '
ಕ.ಪ್ರ.ವಾರ್ತೆ, ಕೊಪ್ಪ, ಏ 20 ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ನರ್ಮ್ ಯೋಜನೆಯಡಿ ಬಿಡುಗಡೆ ಮಾಡಿದ ಕೋಟ್ಯಂತರ ಅನುದಾನ ಸದ್ಬಳಕೆ ಮಾಡದ ರಾಜ್ಯ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ಶೃಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಆರೋಪಿಸಿದರು.
ತಾಲೂಕಿನ ನರಸೀಪುರ ಬ್ರಹ್ಮನಕೋಡು ಪರಿಶಿಷ್ಟ ಕಾಲೋನಿಯಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಕಾಲೋನಿಯಲ್ಲಿ ಹಿಂದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಕಾಲದಲ್ಲಿ 20 ಅಂಶಗಳ ಯೋಜನೆಯಡಿ ನಿರ್ಮಾಣವಾದ ಮನೆಗಳ ಹೊರತಾಗಿ ಒಂದೇ ಒಂದು ಹೊಸ ಮನೆ ನಿರ್ಮಾಣವಾಗಿಲ್ಲ ಎಂದು ಆರೊಪಿಸಿದರು.
ಕಾಡಪ್ಪ ಗೌಡ, ಪಕ್ಷದ ಮುಖಂಡ ಕೋಡ್ರು ಶ್ರೀನಿವಾಸ, ಒಣಿತೋಟ ರತ್ನಾಕರ್, ನಾರ್ವೆ ಅಶೋಕ್, ಮಹಮ್ಮದ್ ಸಾದಿಕ್, ಚಂದ್ರಶೇಖರ್, ಪೇಟೆ ಸತೀಶ್, ಮಹ್ಮದ ಇಸ್ಮಾಯಿಲ್ ಹಾಜರಿದ್ದರು.