ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

3 ದಿನಗಳ ಕಾಲಶ್ರೀರಾಮೋತ್ಸವ

Lingaraj Badiger
Updated On : 22 Apr 2013, 11:28 am

ತರೀಕೆರೆ: ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಪಟ್ಟಣದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಮೂರು ದಿನಗಳ ಕಾಲ ಶ್ರೀರಾಮೋತ್ಸವ ಏರ್ಪಡಿಸಲಾಗಿತ್ತು. ರಾಮೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ಪ್ರಾರ್ಥನಾಪೂರ್ವಕ ಸ್ವಸ್ತಿ ಪುಣ್ಯಾಹವಾಚನ, ನಾಂದೀ ಋತ್ವಿಗ್ವರಣ, ದೇವತಾ ಸ್ಥಾಪನೆ, ನವಗ್ರಹ ಜಪ, ಸೂರ್ಯನಮಸ್ಕಾರ, ಶ್ರೀಮದ್ರಾಮಾಯಣ ಸುಂದರಕಾಂಡ ಪಾರಾಯಣ, ಶ್ರೀ ರಾಮಚಂದ್ರರಿಗೆ ಶ್ರೀ ರುದ್ರಾಭಿಷೇಕ ಪೂರ್ವಕ ಮಹಾಪೂಜೆ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮತಾರಕ ಹೋಮ- ಶ್ರೀ ಸೀತಾರಾಮಚಂದ್ರ ಸ್ವಾಮಿಯವರಿಗೆ ಪಟ್ಟಾಭಿಷೇಕ ಮಹೋತ್ಸವ ಮತ್ತು ಶ್ರೀರಾಮತಾರಕ ಹೋಮದ ಪುರ್ಣಾಹುತಿ ಕಾರ್ಯಕ್ರಮಗಳು ನಡೆದವು.
ನ್ಯೂಟೌನ್‌ನಲ್ಲಿ ಶ್ರೀರಾಮೋತ್ಸವ
ಭದ್ರಾವತಿ: ಶ್ರೀ ರಾಮನವಮಿ ಅಂಗವಾಗಿ ಪಟ್ಟಣದ ನ್ಯೂಟೌನ್‌ನಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ರಾಮೋತ್ಸವದ ರಾಮತಾರಕ ಹೋಮ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶಾರದಾ ಹೋಮ ಇತ್ಯಾದಿ ಧಾರ್ಮಿಕ ಕೈಂಕರ್ಯಗಳನ್ನು ಶಿವರಾಮ ಶಾಸ್ತ್ರಿಗಳು ಹಾಗೂ ಮೋಹನ ಶಾಸ್ತ್ರಿಗಳು ನಡೆಸಿಕೊಟ್ಟರು. ಬೆಳಗ್ಗೆ 8ಕ್ಕೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿ ಹೋಮಗಳು ನಡೆದು ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು. ಹಾಸನದ ಎಚ್.ಎಸ್. ರಾಮಸ್ವಾಮಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ನೂರಾರು ಭಕ್ತರು ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು. ದಾನಿಗಳನ್ನು ಈ ಸಂದರ್ಭದಲ್ಲಿ ದೇವಾಲಯ ಸಮಿತಿಯವರು ಸನ್ಮಾನಿಸಿದರು. ಹರೀಂದ್ರನಾಥ್ ದಂಪತಿಗಳು ಹೋಮವನ್ನು ನೆರವೇರಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement