ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ಗೆಲವಿಗೆ ಸಾಮೂಹಿಕ ಪ್ರಯತ್ನ

Lingaraj Badiger
Updated On : 22 Apr 2013, 11:22 am

ಕ.ಪ್ರ.ವಾರ್ತೆ,ಕಡೂರು,ಏ.21
ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ಶ್ರಮಿಸುವ ಮೂಲಕ ಎಲ್ಲರ ಶ್ರಮದಿಂದ ಬಿಜೆಪಿ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದು ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು ಹೇಳಿದರು.      
  ಅವರು ಕಡೂರು ಪಟ್ಟಣದಲ್ಲಿ ಬಿಜೆಪಿ ತೊರೆದಿದ್ದ ಮುಖಂಡ ಕೆ.ಎಎಚ್. ಶಂಕರ್ ಅವರನ್ನು ಶಾಸಕ ಡಾ ವೈ.ಸಿ.ವಿಶ್ವನಾಥ್ ಸಮ್ಮುಖದಲ್ಲಿ ಮರಳಿ ಮಾತೃಪಕ್ಷಕ್ಕೆ ಬರಮಾಡಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸಮುದ್ರವಿದ್ದಂತೆ: ಬಿಜೆಪಿ ದೊಡ್ಡ ಸಮುದ್ರವಿದ್ದಂತೆ. ಈ ಸಮುದ್ರದಲ್ಲಿ ಎಲ್ಲರೂ ಸಾಮೂಹಿಕ ನಾಯಕತ್ವದ ಮೂಲಕ ಬೆಳೆಯುತ್ತಿದ್ದು, ಪಕ್ಷದ ಸಿದ್ಧಾಂತ, ತತ್ವ ಹಾಗೂ ನೀತಿಯಡಿ ಬೆಳೆದು ಪಕ್ಷ ಎಲ್ಲರನ್ನೂ ಬೆಳೆಸುತ್ತಿದೆ. ಪಕ್ಷವನ್ನು ಬೆಳೆಸಲು ಎಲ್ಲರೂ ಕೈಜೋಡಿಸಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕಿದೆ ಎಂದರು.
 ಬಿಜೆಪಿ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಯಿಂದ ಮತದಾರರಲ್ಲಿ ಮತ ಕೇಳುತ್ತಿದ್ದೇವೆ. ರಾಜ್ಯದ ಬಡವರ ಹಾಗೂ ಜನಸಾಮಾನ್ಯರ ಪರವಾಗಿ ರೂಪಿಸಿದ ನೂರಾರು ಯೋಜನೆಗಳು ಪ್ರತೀ ಮನೆ ಮನೆಗಳಲ್ಲಿ ಇರುವುದರಿಂದ ಬಿಜೆಪಿ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಮತ ಯಾಚಿಸಲಾಗುತ್ತಿದೆ. ಕ್ಷೇತ್ರದ ಎಲ್ಲೆಡೆ ಬಿಜೆಪಿ ಅಲೆ ಹೆಚ್ಚಾಗಿದೆ ಎಂದರು.
  ಶಾಸಕ ಡಾ ವೈ.ಸಿ. ವಿಶ್ವನಾಥ್, ಮುಖಂಡ ಕೆ.ಎಚ್. ಶಂಕರ್, ತಾಪಂ ಸದಸ್ಯ ಆರ್. ಶಿವಕುಮಾರ್, ಮುಖಂಡ ಜೆ.ಆರ್. ಸತೀಶ್ ಗೌಡ, ಜೆ.ಬಿ. ವೀಣಾ, ನಂದೀಶ್, ಅಭಿಲಾಷ್, ಗ್ರಾಪಂ ಅಧ್ಯಕ್ಷ ರಾಜಣ್ಣ, ಎಮ್ಮೇದೊಡ್ಡಿ ಶಿವಣ್ಣ, ದೇವರಾಜು ಮೊದಲಾದವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement