ಆಸ್ತಿ ತೆರಿಗೆ ಶೇಕಡ 5 ರಿಯಾಯಿತಿ
ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ವಯ 2013-14ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.30 ರೊಳಗೆ ಪಾವತಿಸಿ ಶೇ. 5 ರಿಯಾಯಿತಿ ಪಡೆಯಬಹುದಾಗಿದೆ.
ಆಸ್ತಿ ತೆರಿಗೆ, ನೀರಿನ ತೆರಿಗೆಯನ್ನು ಯಾವುದೇ ದಂಡ ಇಲ್ಲದೆ ಪಾವತಿಸಲು ಜೂ.30 ಕೊನೆಯ ದಿನವಾಗಿದ್ದು, ಜೂ.30 ರನಂತರದ ಪಾವತಿಗೆ ಶೇ. 2 ದಂಡ ವಿಧಿಸಲಾಗುವುದು. ತಪ್ಪಿದ್ದಲ್ಲಿ ಅಂತಹ ಕಟ್ಟಡಗಳಿಗೆ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸುವುದಲ್ಲದೆ, ಜಪ್ತಿ ವಾರೆಂಟ್ ಕಾರ್ಯಗತಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸಬೇಕೆಂದು ನಗರಸಭಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.