ಚಿನ್ನಾಭರಣ, ನಗದು ಕಳ್ಳತನ
ಕೊಪ್ಪ: ಪಟ್ಟಣದ ಡೈಯಾಸ್ ಕಾಪೌಂಡ್ನಲ್ಲಿ ನಡೆದ ಕಳ್ಳತನದಲ್ಲಿ 60 ಸಾವಿರ ಚಿನ್ನಾ ಅಭರಣ ಹಾಗೂ ರು. 15 ಸಾವಿರ ನಗದು ಕಳ್ಳತನವಾಗಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ಶಿವಶಂಕರ್ ಎಂಬುವರು ತನ್ನ ಸಂಬಂಧಿಕರ ಮನೆಗೆ ಶನಿವಾರ ತೆರಳಿದ್ದು, ವಾಪಸ್ಸಾದ ಸಂದರ್ಭದಲ್ಲಿ ಮನೆ ಬೀಗ ಮುರಿದು ಮನೆಯಲ್ಲಿ ಬೀರುವಿನಲ್ಲಿದ್ದ 15 ಸಾವಿರ ನಗದು, 60 ಸಾವಿರ ಮೌಲ್ಯದ 1 ಜೊತೆ ಚಿನ್ನದ ಓಲೆ, ಒಂದು ಉಂಗುರ, ಸರ ಹಾಗೂ ಬೆಳ್ಳಿಯ ಕಡಗಗನ್ನೊಳಗೊಂಡ ಒಟ್ಟು 60 ಸಾವಿರ ಮೌಲ್ಯದ ಆಭರಣಗಳು ಕಳ್ಳತನವಾಗಿವೆ. ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.