ತೇಜೋವಧೆ ಯತ್ನ: ಆರೋಪ
ಕ.ಪ್ರ.ವಾರ್ತೆ ಮೂಡಿಗೆರೆ ಏ.22
ಜೆಡಿಎಸ್ ಪಕ್ಷವು ನೇರ ಸ್ಪರ್ಧೆ ಎದುರಿಸದೇ ಪತ್ರಿಕೆಯೊಂದರಲ್ಲಿ ತಮ್ಮನ್ನು ತೇಜೋವಧೆ ಮಾಡುವ ಮೂಲಕ ಜೆಡಿಎಸ್ ಅಭ್ಯರ್ಥಿ ಓಡುತ್ತಿರುವ ಕುದುರೆ ಈ ಬಾರಿ ಗೆದ್ದೆ ಗೆಲ್ಲುತದೆ ಎಂದು ಅಪಪ್ರಚಾರ ಮಾಡಿಸುವ ಮೂಲಕ ತನ್ನ ತನವನ್ನು ತೋರಿಸಿದೆ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ -ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದೆ. ತಾವು ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಆಗದ ಕೆಲಸ ಕಾರ್ಯಗಳನ್ನು ತಾವು ಶಾಸಕರಾಗಿ ತಮ್ಮ ಅವಧಿಯಲ್ಲಿ ಪೂರ್ಣ ಗೊಳಿಸಿರುವ ತೃಪ್ತಿ ನನಗಿದೆ. ನಾನು ಮಾಡಿರುವ ಕೆಲಸಗಳಿಗೆ ಬಹಿರಂಗವಾಗಿಯೇ ಜನಾಭಿಪ್ರಾಯ ಮೂಡುತ್ತಿದೆ. ಅಷ್ಟೇ ಅಲ್ಲದೆ ವಿವಿಧ ಪಕ್ಷಗಳ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಸೇರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ನಾನು ಒಕ್ಕಲಿಗ ವಿರೋಧಿ ಅಲ್ಲ: ನಾನು ಒಕ್ಕಲಿಗ ವಿರೋಧಿ ಅಲ್ಲ. ವಕ್ಕಲಿಗರಿಂದಲೇ ತಮಗೆ ಕ್ಷೇತ್ರದ ಶಾಸಕ ಸ್ಥಾನ ದೊರಕಿದ್ದು. ಆದರೆ, ನನ್ನ ಅಭಿವೃದ್ಧಿ ಸಹಿಸದ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಜಾತಿ ವಿಷ ಬೀಜ ಭಿತ್ತಿವೆ. ವಕ್ಕಲಿಗರಷ್ಟೆ ಅಲ್ಲ ಎಲ್ಲ ವರ್ಗದ ಜನರು ನನಗೆ ಆಶೀರ್ವಾವಾದ ಮಾಡುತ್ತಿದ್ದು, ನಾಲ್ಕನೇ ಭಾರಿಗೆ ಸ್ಪರ್ಧಿಸಿರುವ ನನಗೆ ಎಲ್ಲ ವರ್ಗಗಳ ಬೆಂಬಲ ದೊರೆತಿದೆ ಎಂದು ಹೇಳಿದರು.
ತಮ್ಮ ಮೇಲೆ ಅವಹೇಳನಕಾರಿಯಾಗಿ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿರುವುದಾಗಿ ತಿಳಿಸಿದರು.
ಬಿಜೆಪಿಯ ಯುವಮೋರ್ಚಾದ ಅಧ್ಯಕ್ಷ ಸುಧೀರ್ ಮಾತನಾಡಿದರು
ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷ ಡಿ.ಎಸ್. ಸುರೇಂದ್ರ, ಎಚ್.ಆರ್. ಪ್ರಮೋದ್, ಗಜೇಂದ್ರ, ಪಂಚಾಕ್ಷರಿ, ಲಕ್ಷ್ಮಣ್, ವಕೀಲರಾದ ಉಮೇಶ್. ವಿಕ್ರಂ, ಸುನೀಲ್, ಧರ್ಮಪಾಲ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.