ಪಕ್ಷೇತರ ಅಭ್ಯರ್ಥಿ ರಾಜುನಾಯ್ಕ ಸ್ಪಷ್ಟನೆ
ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಜುನಾಯ್ಕ ಅವರು ನಾಮಪತ್ರ ಹಿಂಪಡೆದಿದ್ದಾರೆ ಎಂಬ ಗೊಂದಲದ ಹೇಳಿಕೆಗಳಿಗೆ ರಾಜುನಾಯ್ಕ ಸ್ಪಷ್ಟನೆ ನೀಡಿದ್ದಾರೆ.
ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈಗಾಗಲೇ ಸ್ಥಳೀಯ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾನೆ, ಪ್ರಚಾರ ನಡೆದಿದೆ ಎಂದು ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಧಾರ್ಮಿಕ ಕಾರ್ಯಕ್ರಮ
ಶಿವಮೊಗ್ಗ: ಭದ್ರಾವತಿಯ ಮಾರಶೆಟ್ಟಿಹಳ್ಳಿ ವೀರಭದ್ರಸ್ವಾಮಿ ಸೇವಾ ಸಮಿತಿ ಏ.23ರಂದು ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಳಗ್ಗೆ 9ರಿಂದ ಕ್ಷೇತ್ರನಾಥ ವೀರಭದ್ರಸ್ವಾಮಿ, ತಿರುಮಲಸ್ವಾಮಿ ದೇವರುಗಳ ಕೆಂಡಾರ್ಚನೆ ಹಾಗೂ ರಥೋತ್ಸವ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.