ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಕೊಪ್ಪ: ತಾಲೂಕಿನ ಕೊಪ್ಪ ಗ್ರಾಮಾಂತರ ಗ್ರಾಪಂ ವ್ಯಾಪ್ತಿಯ ಹುಲ್ಲುಮಕ್ಕಿ ಗ್ರಾಮದ ಸೋಮ್ಲಾಪುರ ರಸ್ತೆ ನಿವಾಸಿಗಳು ವಿಧಾನ ಸಭೆಯ ಚುನಾವಣೆಗೆ ಮತ ಬಹಿಷ್ಕಾರ ಮಾಡುವುದಾಗಿ ತಹಸೀಲ್ದಾರ್ಗೆ ಲಿಖಿತವಾಗಿ ತಿಳಿಸಿದ್ದಾರೆ.
ಸೋಮ್ಲಾಪುರ ರಸ್ತೆಯ ಪಟ್ಟಣಕ್ಕೆ ಸಮೀಪದಲ್ಲಿ ಇದ್ದರೂ 2 ದಶಕಗಳಿಂದ ಈ ಪ್ರದೇಶ ಮೂಲ ಸೌಕಾರ್ಯಗಳಿಂದ ವಂಚಿತವಾಗಿದೆ. ಇದುವರೆಗೂ ಕುಡಿಯುವ ನೀರು, ಬೀದಿದೀಪ ಒದಗಿಸಿಲ್ಲ. ಅಲ್ಲದೆ ಸೋಮ್ಲಾಪುರ ರಸ್ತೆ ಹಾಳಾಗಿ ದಶಕ ಕಳೆದಿದ್ದು, ಹಲವು ಬಾರಿ ರಸ್ತೆ ಸರಿಮಾಡುವಂತೆ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಮುಂಬರುವ ವಿಭಾನಸಭಾ ಚುನಾವಣೆಗೆ ಮತ ಹಾಕದಿರಲು ಈ ಭಾಗದ ಮತದಾರು ಒಮ್ಮತ ತೀರ್ಮಾನ ಕೈಗೊಂಡಿದ್ದೇವೆ ಎಂದು ತಹಸೀಲ್ದಾರ್ ಶ್ರೀಧರ್ಗೆ ಮನವಿ ಸಲ್ಲಿಸಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.