ರಾಜೇಗೌಡ ರೋಡ್ ಶೋ
ನರಸಿಂಹರಾಜಪುರ: ಬಾಳೆಹೊನ್ನೂರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಭಾನುವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ನಂತರ ಬಸ್ಸು ನಿಲ್ದಾಣದ ಸಮೀಪದ ಹಾಲಪ್ಪಗೌಡ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಬಿಜೆಪಿ 5 ವರ್ಷಗಳ ಕಾಲ ಭ್ರಷ್ಟ ಆಡಳಿತ ನಡೆಸಿದ್ದು, ಇದರಿಂದ ಭ್ರಮನಿರಶನಗೊಂಡ ಬಿಜೆಪಿ ಯುವಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ವಕೀಲ ಸುಧೀರ್ಕುಮಾರ್ ಮರೊಳ್ಳಿ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಸಂಸದರಾಗಿದ್ದ ಸದಾನಂದಗೌಡರು ಮುಖ್ಯಮಂತ್ರಿಯಾದರೂ ಮಲೆನಾಡಿನ ಸಮಸ್ಯೆ ಬಗಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಎಂದರು. ಸಭೆಯಲ್ಲಿ ಎಐಸಿಸಿ ಮಹಿಳಾ ಘಟಕದ ಕಾರ್ಯಾದರ್ಶಿ ಬಿ.ಸಿ. ಗೀತ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಚೆನ್ನಕೇಶವ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್, ಕಾಂಗ್ರೆಸ್ ಮುಖಂಡರಾದ ಸಚಿನ್ ಮೀಗ, ಮಹಮ್ಮದ್ ಇಪ್ತೀಕರ್ ಆದಿಲ್, ಫಿಲೋಮಿನಾ ಫೆರಿಸ್ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿಯ ಕಲ್ಮಕ್ಕಿ ಉಮೇಶ್, ದಯಾನಂದ್ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.