ಸಂಗಮೇಶ್ವರಗೆ ಸಿಪಿಐ ಬೆಂಬಲ
ಭದ್ರಾವತಿ: ಪಕ್ಷೇತರರಾಗಿ ಸ್ಪರ್ಧಿಸಿರುವ ಬಿ.ಕೆ. ಸಂಗಮೇಶ್ವರ ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷವು ಬೆಂಬಲ ನೀಡುವುದಾಗಿ ಪಕ್ಷದ ರಾಜ್ಯ ಮಂಡಳಿ ಸದಸ್ಯ ಡಿ.ಸಿ. ಮಾಯಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಗಮೇಶ್ವರ್ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಶಾಸಕರಾಗಿದ್ದು, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮೇ 5ರಂದು ನಡೆಯಲಿರುವ ಶಾಸನಸಭಾ ಚುನಾವಣೆಯಲ್ಲಿ ಸಂಗಮೇಶ್ವರ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರನ್ನು ಬೆಂಬಲಿಸರು ಭಾರತ ಕಮ್ಯುನಿಸ್ಟ್ ಪಕ್ಷದ (ಸಿ.ಪಿ.ಐ) ಶಿವಮೊಗ್ಗ ಜಿಲ್ಲಾ ಸಮಿತಿ ತೀರ್ಮಾನಿಸಿದೆ ಎಂದಿದ್ದಾರೆ.
ಭದ್ರಾವತಿ ಕ್ಷೇತ್ರದ ಮತದಾರರು ಬಿ.ಕೆ. ಸಂಗಮೇಶ್ವರ ಅವರ ಟಿ.ವಿ. ಗುರುತಿಗೆ ಮತ ನೀಡುವ ಮೂಲಕ ಅವರಿಗೆ ಜಯಗಳಿಸಿಕೊಡಬೇಕೆಂದು ಅವರ ವಿನಂತಿಸಿದ್ದಾರೆ.