'ಸಾಧನೆಗಳೇ ಮಾತಾಗಲಿ'
ಕ.ಪ್ರ.ವಾರ್ತ್ಣೆ ಎನ್.ಆರ್.ಪುರ್ಣಏ.22
ಮಾತುಗಳೇ ಸಾಧನೆಯಾಗಬಾರದು. ಸಾಧನೆಗಳೇ ಮಾತುಗಳಾಗಬೇಕು. ನಾನು ಶೃಂಗೇರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇ ನನಗೆ ಮತ ತಂದುಕೊಡಲಿದೆ ಎಂದು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಭಾನುವಾರ ಬಾಳೆಹೊನ್ನೂರು ಪಟ್ಟಣದ ಜೇಸಿ ವೃತ್ತದಲ್ಲಿ ನಡೆದ ಬಿಜೆಪಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿ, ಹಿಂದಿನ ಸರ್ಕಾರವು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಕೇವಲ 27 ಕೋಟಿ ಮಾತ್ರ ಮಂಜೂರು ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ 467 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ 45 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಹಜ್ ಭವನ ನಿರ್ಮಿಸಲಾಗಿದೆ. ನಮ್ಮ ಸರ್ಕಾರವು ಎಲ್ಲಾ ಧರ್ಮದವರಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ರಸ್ತೆಗೆ 23 ಕೋಟಿ: ಆಲ್ದೂರು- ಬಿದರುಗೋಡು ರಸ್ತೆಗೆ 23 ಕೋಟಿ ಮಂಜೂರು ಮಾಡಿಸಿದ್ದೇನೆ. ಬಾಳೆಹೊನ್ನೂರು ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿ ಮಾಡಲು ಯೋಜನೆ ರೂಪಿಸಿದ್ದೇನೆ. ರಸ್ತೆ ಅಗಲೀಕರಣಕ್ಕೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಸ್ವಾಂತಂತ್ರ್ಯ ಬಂದು 65 ವರ್ಷವಾದರೂ ದಲಿತ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿರಲಿಲ್ಲ. ಆದರೆ, ಬಿಜೆಪಿ ಸರ್ಕಾರವು ಎಲ್ಲಾ ದಲಿತ ಕಾಲೋನಿಗಳಿಗೂ ಕಾಂಕ್ರೀಟ್ ರಸ್ತೆ ಮಾಡಿಸಿದೆ. ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಹಿಸಲಾಗದೆ ವಿರೋದ ಪಕ್ಷಗಳು ಅಪ ಪ್ರಚಾರದಲ್ಲಿ ನಿರತರಾಗಿದ್ದಾರೆ.ನನ್ನ ಗೆಲವಿಗೆ ಅಭಿವೃದ್ದಿ ಕಾರ್ಯಗಳೇ ಪೂರಕವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರ ಸಭೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಟಿ. ವೆಂಕಟೇಶ್, ಬೋಜೇಗೌಡ, ಕೆ.ಕೆ. ವೆಂಕಟೇಶ್, ಪುಣ್ಯಪಾಲ್, ವೆನಿಲ್ಲಾ ಭಾಸ್ಕರ್ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಮಸೀದಿ ಕೆರೆಯ ಶಾಫಿ ಸೇರಿದಂತೆ 20 ಮುಸ್ಲಿಂ ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.