ಒಗ್ಗಟ್ಟಾಗಿ ಜೆಡಿಎಸ್ ಕಟ್ಟೋಣ
ಚಿಕ್ಕಮಗಳೂರು: ರಾಜಕೀಯದ ಚದುರಂಗದಾಟದಲ್ಲಿ ಸಿಹಿ, ಕಹಿ, ನೋವು, ನಲಿವು ಬರುತ್ತಿರುತ್ತದೆ ಹೋಗುತ್ತಿರುತ್ತದೆ. ನೋವನ್ನು ಮರೆತು ನಲಿವು ಸ್ವೀಕರಿಸುವುದೆ ಸದ್ಗುಣ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಹೇಳಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಜೆಪಿ ಪಕ್ಷ ತೊರೆದು ಬಂದ ಹೆಚ್.ಹೆಚ್. ದೇವರಾಜ್ ನೇತೃತ್ವದ ತಂಡವನ್ನು ಸ್ವಾಗತಿಸಿ ಅವರು ಮಾತನಾಡಿದರು. ಹೆಚ್.ಹೆಚ್. ದೇವರಾಜ್ ಮಾತನಾಡಿದರು. ಬಿಎಸ್ಆರ್ ಪಕ್ಷದ ಕೆ. ಭರತ್, ಕೆಜೆಪಿಯ ಜಿ. ರವಿಕುಮಾರ್, ಜಮೀಲ್ ಅಹಮದ್, ಚಂಗಪ್ಪ, ರೆಹಮಾನ್ ಪಕ್ಷಕ್ಕೆ ಸೇರ್ಪಡೆಯಾದರು. ಎಸ್.ಎಲ್. ಬೋಜೇಗೌಡ, ಹೊಲದಗದ್ದೆ ಗಿರೀಶ್, ಎಂ.ಡಿ. ರಮೇಶ್, ಜಯರಾಜ್ ಅರಸ್, ಹೆಚ್.ಎನ್. ಕೃಷ್ಣೇಗೌಡ, ಪದ್ಮಾ ತಿಮ್ಮೇಗೌಡ ಇದ್ದರು.