ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಮನವಿ
ಮೂಡಿಗೆರೆ: ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪ್ರಾಮಾಣಿಕ ರಾಜಕಾರಣಿಯಾಗಿದ್ದು, ತಮ್ಮ ಆಶಿರ್ವಾದಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಮೋಟಮ್ಮ ಹೇಳಿದರು. ಬಣಕಲ್ ಹೋಬಳಿ ಕೇಂದ್ರದಲ್ಲಿ ರೋಡ್ ಶೋ ಬಳಿಕ ಮಾತನಾಡಿ, ಕ್ಷೇತ್ರದ ದಲಿತ ಮತಗಳು ಚದುರಿ ಹೋಗಬಾರದು. ಅಪ್ರಾಮಾಣಿಕರಿಗೆ ಅಧಿಕಾರ ದೊರೆಯುವುದರಿಂದ ಅಭಿವೃದ್ಧಿ ಸಾದ್ಯವಿಲ್ಲ ಎಂದರು. ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ. 2008ರಲ್ಲಿ ಅಲ್ಪ ಮತಗಳಿಂದ ಸೋಲುಂಡಿದ್ದು, ಕ್ಷೇತ್ರವನ್ನು ಮಾದರಿಯಾಗಿಸುವ ಕನಸು ಹೊತ್ತುಕೊಂಡಿದ್ದೇನೆ. ನನ್ನನ್ನು ಮತದಾರ ಬಂಧುಗಳು ಆಶಿರ್ವದಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಜಿಪಂ ಸದಸ್ಯೆ ಜ್ಯೋತಿ ಹೇಮಶೇಖರ್, ತಾಪಂ ಸದಸ್ಯ ಸಬ್ಲಿ ದೇವರಾಜ್ ಇದ್ದರು.
ಅಕ್ರಮ ನೀರು ಪೂರೈಕೆ; ಪೈಪ್ ವಶ
ಮೂಡಿಗೆರೆ: ಸಮೀಪದ ಸುಂಡೆಕೆರೆ ಹಳ್ಳಕ್ಕೆ ನೀರು ಬರುವ ಕೆಲ ಪ್ರದೇಶಗಳಲ್ಲಿ ಪ್ರಬಾವಿಗಳು ತಮ್ಮ ಗದ್ದೆ, ತೋಟಗಳಿಗೆ ಅಕ್ರಮವಾಗಿ ನೀರು ಹಾಯಿಸುತ್ತಿದ್ದ ಮೋಟಾರಿನ ಪೈಪ್ಗಳನ್ನು ಪಪಂ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡರು. ಪಪಂ ವ್ಯಾಪ್ತಿಯ ಸಹಸ್ರಾರು ಮನೆಗಳಿಗೆ ಕುಡಿಯುವ ನೀರನ್ನು ಸುಂಡೆಕೆರೆ ಹಳ್ಳದಿಂದ ಸರಬರಾಜು ಮಾಡಲಾಗುತ್ತಿದೆ. ಇತೀಚೆಗೆ ಸುಂಡೆಕೆರೆ ಹಳ್ಳದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಪಟ್ಟಣದ ಕೆಲ ವಾರ್ಡ್ಗಳಲ್ಲಿ ತೀವ್ರ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಇದಕ್ಕೆ ಕಾರಣವೇನೆಂದು ಪರಿಶೀಲಿಸಿದಾಗ ಸುಂಡಿಕೆರೆ ಹಳ್ಳಕ್ಕೆ ನೀರು ಸಾಗುವ ಕಡುವಳ್ಳಿ ಮತ್ತು ನಡುವಿನ ಮಾಡ್ಕಲ್ ಸಮೀಪ ನೀರು ಹಾಯಿಸಲು ಹಳ್ಳದೊಳಗಿಂದ ಅಕ್ರಮವಾಗಿ ಪೈಪ್ ಹಾಕಿ ನೀರು ಬಳಕೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಪಪಂ ಅಧಿಕಾರಿಗಳು ಸ್ಥಳಕ್ಕೆ ಭೆಟಿ ನೀಡಿ ಸುಮಾರು ನಾಲ್ಕು ಸ್ಥಳಗಳಲ್ಲಿ ನೀರಿನೊಳಗೆ ಅಳವಡಿಸಿದ್ದ ಪೈಪ್ಗಳನ್ನು ವಶಪಡಿಸಿಕೊಂಡರು. ಈ ವೇಳೆ ಪಪಂ ಮುಖ್ಯಾಧಿಕಾರಿ ಗಣೇಶ್, ಕಿರಿಯ ಅಭಿಯಂತರೆ ವಿಧ್ಯಾ, ಆರೋಗ್ಯ ಅಧಿಕಾರಿ ಪ್ರಕಾಶ್, ಸಹಾಯಕ ಠಾಣಾಧಿಕಾರಿ ಉಮಾನಾಥ್, ಪೊಲೀಸ್ ಕೃಷ್ಣಮೂರ್ತಿ ಇದ್ದರು.