ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಆಯ್ಕೆ
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಏ.23
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸದಾಶಿವ ಅವರನ್ನು ನರಸಿಂಹರಾಜಪುರ ತಾಲೂಕು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಮುತ್ತಿನಕೊಪ್ಪ ಹೋಬಳಿಗೆ ಹೋಬಳಿ ಅಧ್ಯಕ್ಷ ಇ.ಸಿ. ಶೇವಿಯಾರ್, ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಎನ್.ಪಿ. ರಮೇಶ್, ಖಾಂಡ್ಯ ಹೋಬಳಿ ಅಧ್ಯಕ್ಷ ಸೋಮೇಶ್, ಪಪಂ ವ್ಯಾಪ್ತಿಗೆ ನಗರ ಘಟಕದ ಅಧ್ಯಕ್ಷ ಕೆ.ವಿ. ವಸಂತಕುಮಾರ್ಗೆ ಚುನಾವಣಾ ಪ್ರಚಾರದ ಜವಬ್ದಾರಿ ನೀಡಲಾಗಿದೆ. ಹೋಬಳಿ ಅಧ್ಯಕ್ಷರ ಜೊತೆಗೆ ಆಯಾ ತಂಡದ ಸದಸ್ಯರನ್ನು ನೇಮಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೂತನ ಚುನಾವಣಾ ಪ್ರಚಾರ ಸಮಿತಿಯ ತಾಲೂಕು ಅಧ್ಯಕ್ಷ ಪಿ.ಆರ್. ಸದಾಶಿವ, ಬಿ.ಸಿ. ಗೀತ, ಟಿ.ವಿ. ರಾಜು, ಕೆ.ಎಂ. ಗಂಗಾಧರ್, ಶೇವಿಯಾರ್, ಕೆ.ವಿ. ವಸಂತಕುಮಾರ್ ಇದ್ದರು.