ಕಾನೂನು ಅರಿವು ಕಾರ್ಯಕ್ರಮ
ಚಿಕ್ಕಮಗಳೂರು: ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಕಾರ್ಯ ಮಗ್ನತೆಯಿಂದ ನಿರ್ವಹಿಸಿದಾಗ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜ್ ಎ. ಪಾಟೀಲ್ ಹೇಳಿದ್ದಾರೆ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವೈದ್ಯಾಧಿಕಾರಿಗಳು, ಆರಕ್ಷಕ ಅಧಿಕಾರಿಗಳು ಮತ್ತು ವಕೀಲರಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲಸದ ಒತ್ತಡದಿಂದ ಸಂಭವಿಸಬಹುದಾದ ಲೋಪಗಳನ್ನು ಇಂತಹ ಅರಿವು ಕಾರ್ಯಕ್ರಮಗಳಲ್ಲಿ ನೀಡುವ ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದರ ಮೂಲಕ ಸಾಮಾನ್ಯವಾಗಿ ಆಗುವಂತಹ ಲೋಪಗಳನ್ನು ತಿದ್ದಿಕೊಳ್ಳಬಹುದು ಎಂದರು.