ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೇತ್ರದಲ್ಲಿ ಬದಲಾವಣೆ ಗಾಳಿ: ದತ್ತಾ

Rashmi Kasaragodu
Updated On : 24 Apr 2013, 11:29 am

ಕ.ಪ್ರ.ವಾರ್ತೆ ಟಿ ಕಡೂರು ಟಿ  ಏ.23
ಕ್ಷೇತ್ರದಲ್ಲಿ ಬದಲಾವಣೆಯ ದಿನಗಳು ಗೋಚರವಾಗಿ ಕೆಲಸ ಮಾಡುವವರು ಯಾರು ಎಂದು ಜನರು ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾದ ಎಚ್. ಉಮೇಶ್ ಮತ್ತು ಇತರರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಜನರು ನನಗೆ ತೋರಿಸುತ್ತಿರುವ ಪ್ರೀತಿ ಅಭಿಮಾನದಿಂದಾಗಿ ಕ್ಷೇತ್ರದಲ್ಲಿ ಪ್ರಭಲ ಪಕ್ಷವಾಗಿ ಜೆಡಿಎಸ್ ಹೊರಹೊಮ್ಮಿದೆ. ಪಕ್ಷ ಜನಸಾಮಾನ್ಯರ ಪರ ಇರುವುದನ್ನು ಮನಗಂಡು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎಚ್. ಉಮೇಶ್ರವರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಪಕ್ಷದ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್, ಕೆ.ವಿ. ವಾಸು,  ಕೆ.ಎಚ್. ಲಕ್ಕಣ್ಣರೊಂದಿಗೆ ಚರ್ಚಿಸುವ ಮೂಲಕ ಉಮೇಶ್ರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ ಎಂದು ಹೇಳಿ ಉಮೇಶ್ ಮತ್ತು ಸ್ನೇಹಿತರಿಗೆ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆಯಾದ ಉಮೇಶ್ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತರವರ ವ್ಯಕ್ತಿತ್ವ ಹಾಗೂ ಜನರಿಗೆ ಸುಲಭವಾಗಿ ಸಿಗುವ ವ್ಯಕ್ತಿಯಾಗಿ ಜನರ ಕಷ್ಟ ನೋವು ನಲಿವುಗಳಿಗೆ ಸ್ಪಂದಿಸುವ ರೀತಿ ಕಂಡು ದತ್ತರವರನ್ನು ಗೆಲ್ಲಿಸಬೇಕು ಎಂಬ ನಿರ್ಧಾರ ಕೈಗೊಂಡು ಪಕ್ಷ ಸೇರಿರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ನ ಬಿ.ಟಿ. ಗಂಗಾಧರನಾಯ್ಕ, ಕೆ.ಎಸ್. ರಮೇಶ್, ಬಿ.ಪಿ. ನಾಗರಾಜ್, ಚೌಳ ಹಿರಿಯೂರು ಕೃಷ್ಣಮೂರ್ತಿ, ಅಜ್ಜಯ್ಯ ಒಡೆಯರ್, ಮಂಜುನಾಥ ಪ್ರಸನ್ನ, ಡಿ. ಪ್ರಶಾಂತ್, ರವಿ, ಮೂರ್ತಿ, ಸೋಮೇಶ್, ಮಂಜುನಾಥ್, ವೀರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement