ಜೆಡಿಎಸ್ಗೆ ಗೆಲವು: ವಿಶ್ವಾಸ
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಏ.23
ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷೆಗೂ ಮೀರಿದ ಮತ ಪಡೆಯುವ ಮೂಲಕ ಪ್ರಚಂಡ ಗೆಲುವು ದಾಖಲಿಸಲಿದೆ ಎಂದು ಜೆಡಿಎಸ್ ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಮೂಡಿಗೆರೆ ಜೆಡಿಎಸ್ ಕಚೇರಿಯಲ್ಲಿ ವಿವಿಧ ಪಕ್ಷಗಳನ್ನು ತ್ಯಜಿಸಿ ಬಂದವರನ್ನು ಪಕ್ಷದೆಡೆ ಬರಮಾಡಿಕೊಂಡು ಮಾತನಾಡಿ, ಕ್ಷೇತ್ರದ ಜನರ ನಿರೀಕ್ಷೆ ಈ ಚುನಾವಣೆಯಲ್ಲಿ ಜೆಡಿಎಸ್ ಮೇಲಿದೆ. ಆಡಳಿತಾರೂಡರ ಜನ ವಿರೋಧಿ ನೀತಿ ಮತ್ತು ಭಂಡತನದಿಂದ ಸಾಮಾನ್ಯ ನಾಗರಿಕರು ಬೇಸತ್ತು ಹೋಗಿದ್ದರಿಂದ ಅದರ ಲಾಭ ಜೆಡಿಎಸ್ಗೆ ದೊರೆಯಲಿದೆ ಎಂದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್ ಅಜೀತ್ ಕುಮಾರ್ ಮಾತನಾಡಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಗೆಲುವಿಗೆ ಬೇಕಾಗಿರುವ ಅರ್ಹತೆ ಹೊಂದಿದಾರೆ. ಬಿಜೆಪಿ ಮತ್ತು ಕಾಂಗೆಸ್ ಪಕ್ಷವನ್ನು ಸಮಾನ ಅಂತರದಲ್ಲಿ ಇಡಲಿರುವ ಜನರು ಜೆಡಿಎಸ್ ಅಭ್ಯರ್ಥಿ ನಿಂಗಯ್ಯರ ಮೇಲೆ ಭರವಸೆ ಹೊಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್ಸಾರ್ನಿಂದ ದೇವರಾಜ್ ಗೌಡ, ದೀಪಕ್, ದಿನೇಶ್, ರಾಮಚಂದ್ರ ಜೆಡಿಎಸ್ಗೆ ಅಧೀಕೃತವಾಗಿ ಸೇರ್ಪಡೆಯಾದರು.