ಬೀದಿಗೆ ಬಂದಬಿಜೆಪಿ ಭಿನ್ನಮತ
ಮೂಡಿಗೆರೆ: ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಮತ್ತು ಕಾರ್ಯಕರ್ತರ ನಡುವೇ ಭಿನ್ನಮತ ಬುಗಿಲೆದ್ದಿದ್ದು. ಭಿನ್ನಮತವನ್ನು ಶಮನಗೊಳಿಸಲು ಬಂದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಮೌನವಹಿಸಿ ಹಿಂದಿರುಗಿದ ಘಟನೆ ವರದಿಯಾಗಿದೆ. ಸೋಮವಾರದಂದು ತಾಲೂಕಿನ ಬಣಕಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಲು ಮೂರು ಗಂಟೆಗೆ ಆಗಮಿಸಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ತಡವಾಗಿ ಬಂದರು. ಭಿನ್ನಮತದ ಕಾರ್ಯಕರ್ತರನ್ನು ಸದಾನಂದ ಗೌಡರು ಸಮಾಧಾನ ಪಡಿಸಲು ಯತ್ನಿಸಿ ವಿಫಲರಾದರು. ಕಾರ್ಯಕರ್ತರ ಸಭೆಯ ನಂತರ ಕಚೇರಿಯಿಂದ ಹೊರಕ್ಕೆ ಬಂದ ಮಾಜಿ ಸಿ.ಎಂ. ಪತ್ರಕರ್ತರ ಜೊತೆ ಮಾತನಾಡಿ. ಶಾಸಕರ ವಿರುದ್ಧ ಅಸಮಧಾನದ ಮಾತುಗಳೆ ಕೇಳಿ ಬರುತ್ತಿದೆ. ಪಕ್ಷದ ಹಿರಿಯರು ಮತ್ತು ಕ್ಷೇತ್ರದ ನಾಯಕರೊಂದಿಗೆ ಚರ್ಚಿಸಿ ಇನ್ನೆರಡು ದಿನಗಳಲ್ಲೆ ಭಿನ್ನಮತವನ್ನು ಶಮನಗೊಳಿಸುವುದಾಗಿ ತಿಳಿಸಿದರು. ಸದಾನಂದಗೌಡರು ಮುಖ್ಯ ಮಂತ್ರಿಗಳಾಗಿದ್ದಾಗ ಮೂಡಿಗೆರೆ ಕ್ಷೇತ್ರಕ್ಕೆ ನೀಡಿದ್ದ ಅನುದಾನದಲ್ಲಿ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿದ್ದು ಇದನ್ನು ಸಾರ್ವಜನಿಕರು ಸದಾನಂದ ಗೌಡರ ಗಮನಕ್ಕೆ ತಂದಾಗ ಚುನಾವಣೆ ಮುಗಿದ ನಂತರ ಕಾಮಗಾರಿಗಳ ಬಗ್ಗೆ ಪರಿಶೀಲನೇ ನಡೆಸುವುದಾಗಿ ತಿಳಿಸಿದರು.
ಬಹಿರಂಗವಾಗಿಯೇ ಆಕ್ರೋಷ: ಮೂಡಿಗೆರೆ ಕ್ಷೇತ್ರದ ಆಲ್ದೂರಿನಲ್ಲಿ ಧ್ವಜದ ಕಟ್ಟೆಯ ವಿಷಯದಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಹಿಂದುಗಳ ನಡುವೆಯೇ ವಿಷದ ಬೀಜ ನೆಟ್ಟಿದ್ದರ ಪರಿಣಾಮ. ಬಜರಂಗದಳ ಹಾಗೂ ಡಿಎಸ್ಎಸ್ ನಡುವೆ ವೈಷ್ಯಮ್ಯ ಮೂಡಿಸಿ. ಈಗ ಚುನಾವಣೆ ಸಮೀಪಿಸಿದ್ದಾರೆ. ಮತ ಯಾಚಿಸಲು ಬರುತ್ತಿರುವ ಶಾಸಕರಿಗೆ ಮತಹಾಕದಂತೆ ತಿರ್ಮಾನಿಸಿದ್ದಾಗಿ ಕಾರ್ಯಕರ್ತರು ಸದಾನಂದಗೌಡರ ಗಮನಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮಚಂದ್ರೇಗೌಡ, ಅರಣ್ಯ ವಿಹಾರಧಾಮ ಮತ್ತು ನಿಗಮದ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಎಂ.ಎಲ್. ಕಲ್ಲೇಶ್, ಎಂ.ಆರ್. ಜಗದೀಶ್, ಪಂಚಾಕ್ಷರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಚಾರಕ್ಕೆ ಅಡ್ಡಿ: ಕಾಂಗ್ರೆಸ್ ಆರೋಪ
ನರಸಿಂಹರಾಜಪುರ: ಕಾಂಗ್ರೆಸ್ ಪರ ಕೆಲವು ಸಂಘಟನೆಗಳು ಚುನಾವಣೆ ಪ್ರಚಾರಕ್ಕೆ ಹೋದಾಗ ಬಿಜೆಪಿಯ ಕೆಲ ಮುಖಂಡರು ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಆರೋಪಿಸಿದರು. ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪರ ಮಲೆನಾಡು ಪ್ರಜಾವೇದಿಕೆ ಮತ್ತು ಕೆಲವು ಚಿಂತಕರ ಸಂಘಟನೆ ಮುಖಂಡರು ಸೋಮವಾರ ಮೂಡಬಾಗಿಲು ಗ್ರಾಮದಲ್ಲಿ ಮತ ಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕೆಲವು ಮುಖಂಡರು ನಮ್ಮ ಗ್ರಾಮದಲ್ಲಿ ಮತ ಕೇಳಬೇಡಿ ಎಂದು ಅಡ್ಡಿಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಬಿಜೆಪಿ ಮುಖಂಡರ ವರ್ತನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದರು. ಗಂಗಾಧರ್, ಅಪ್ರೋಜ್, ಾಜು, ಕೆ.ಎ. ಅಬೂಬಕರ್ ಇದ್ದರು.