ಮೇ 12ರಂದು ನೆಮ್ಮಾರಿನಲ್ಲಿ ಉರುಸ್
ಶೃಂಗೇರಿ: ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೆಮ್ಮಾರಿನಲ್ಲಿರುವ ಸೂಫಿ ಸಂತ ಹಜರತ್ ದಿಲಾವರುಷ ಔಲಿಯೀ ದರ್ಗಾದಲ್ಲಿ ವಿಶೇಷ ಉರೂಸ್ ಸಮಾರಂಭ ಮೇ 12ರಂದು ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ದರ್ಗಾದ ಮುಂಭಾಗದಿಂದ ಸಂದಲ್ ಮೆರವಣಿಗೆ ಹೊರಡಲಿದ್ದು, ಮುಖ್ಯ ಬೀದಿಯಲ್ಲಿ ಸಾಗಲಿದೆ. ನಂತರ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.