ಲೋಕಾಯುಕ್ತ ತನಿಖೆಗೆ ಆಗ್ರಹ
ಕೊಪ್ಪ: ಅಭಿವೃದ್ಧಿ ಹೆಸರಿನಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಹಿಂದೆ ಎಂದೂ ಕಾಣದ ಬ್ರಷ್ಟಾಚಾರವನ್ನು ಶಾಸಕ ಡಿ.ಎನ್. ಜೀವರಾಜ್ ಅಧಿಕಾರಾವಧಿಯಲ್ಲಿ ನಡೆಸಿರುವುದಕ್ಕೆ ದಾಖಲೆ ಸಂಗ್ರಹಿಸಲಾಗಿದ್ದು, ಇವನ್ನು ಲೋಕಾಯುಕ್ತ ತನಿಖೆಗೆ ಹಾಕಲಾಗುವುದು ಎಂದು ಪ್ರಜಾಪರಿಷತ್ ವೇದಿಕೆ ಸದಸ್ಯ ಸುಧೀರ್ ಕುಮಾರ್ ಮೋರಳ್ಳಿ ತಿಳಿಸಿದರು.
ಮಂಗಳವಾರ ತಾಲೂಕಿನ ಬೋಮ್ಲಾಪುರದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡರ ಪರ ಮತಯಾಚನಾ ಸಭೆಯಲ್ಲಿ ಮಾತನಾಡಿ, ಬೋಮ್ಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಬಿಜೆಪಿ ಪುಡಾರಿಗಳು 8 ಮೋರಿಗಳನ್ನು ನಿರ್ಮಾಣ ಮಾಡಿ 24 ಮೋರಿಗಳ ಬಿಲ್ ಮಾಡಿಸಿದ್ದಾರೆ. ರು. 1.06 ಕೋಟಿ ವೆಚ್ಚದಲ್ಲಿ ಮಣ್ಣಿನ ಕೆಲಸ ಮಾಡಲಾಗಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಮಾತನಾಡಿ, ಬಿಜೆಪಿ ರಾಜ್ಯದ ಅಭಿವೃದ್ಧಿ ಮಾಡದೆ ಕೇವಲ ಸೀಟಿಗಾಗಿ ನಡೆಸಿದ ಕಿತ್ತಾಟದಿಂದ ಮತದಾರ ಬೆಸತ್ತು ಕಾಂಗ್ರೆಸ್ ಕಡೆ ಒಲವು ತೋರಿದ್ದಾನೆ ಎಂದರು.
ಲಕ್ಷ್ಮೀನಾರಯಾಣ್ ಭಟ್ ಸೇರಿದಂತೆ 12 ಜನ ಕಾಂಗ್ರೆಸ್ ಸೇರಿದರು. ಸಂಸದ ಜಯಪ್ರಕಾಶ್ ಹೆಗಡೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೋಭಿಂತ್, ಎಚ್.ಎಂ. ನಟರಾಜ್, ಎಚ್.ಜಿ. ವೆಂಕಟೇಶ್, ಮೀಗಾ ಚಂದ್ರಶೇಖರ್ ಇದ್ದರು.