ಶ್ರೀಕಂಠಪ್ಪ ಕೆಜೆಪಿಗೆ ಸೇರ್ಪಡೆ
ತರೀಕೆರೆ: ತಮ್ಮ ಬೆಂಬಲಿಗರೊಡನೆ ಸಮೀಪದ ಶಿವನಿಯ ಶ್ರೀಕಂಠಪ್ಪ ಮತ್ತು ಬಸವರಾಜಪ್ಪ ಅವರು ಮಂಗಳವಾರ ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾದರು.
ಕೆಜಿಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಮಾತನಾಡಿ, ಶಿವನಿಯ ಶ್ರೀಕಂಠಪ್ಪ ಮತ್ತು ಬಸವರಾಜಪ್ಪ ಪಕ್ಷದ ತತ್ವ ಮತ್ತು ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಯೋಜನೆಗಳನ್ನು ಅವರು ಮೆಚ್ಚಿದ್ದಾರೆ. ಪಕ್ಷಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.