ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಚೆ ಮತದಾನಕ್ಕೆ ಬ್ರೇಕ್

Rashmi Kasaragodu
Updated On : 25 Apr 2013, 11:32 am

ಕಪ್ರವಾರ್ತೆ, ಚಿಕ್ಕಮಗಳೂರು, ಏ. 24
ಅಂಚೆ ಮತದಾನದ ದುರ್ಬಳಕೆಗೆ ಚುನಾವಣಾ ಆಯೋಗ ಈ ಬಾರಿ ಬ್ರೇಕ್ ಹಾಕಿದೆ.
ಹಾಗಾದರೆ ಇದಕ್ಕೆ ಅವಕಾಶ ಇಲ್ಲವಾ. ಖಂಡಿತವಾಗಿಯೂ ಇದೆ. ಆದರೆ, ಹೊಸದೊಂದು ಮಾರ್ಗವನ್ನು ಕಂಡು ಹಿಡಿದಿದೆ. ಅದನ್ನು ಇದೇ ಮೊದಲ ಬಾರಿಗೆ ಪ್ರಯೋಗ ಮಾಡುತ್ತಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯೋಜನೆಯಾದ ಪತ್ರವನ್ನು ಹಾಗೂ ಫಾರಂ ನಂಬರ್ 12 ಕೊಟ್ಟರೆ ಅವರಿಗೆ ಬ್ಯಾಲೆಟ್ ಪೇಪರ್ ಕೊಡಲಾಗುತ್ತಿತ್ತು. ಅವರು, ಅದನ್ನು ಮನೆಗೆ ತೆಗೆದುಕೊಂಡು ಹೋಗಿ, ವೋಟ್ ಮಾಡಿ ಅದನ್ನು ಅಂಚೆ ಮೂಲಕ ಮತ ಎಣಿಕೆಯ ಮುನ್ನ ಚುನಾವಣಾಧಿಕಾರಿಗಳಿಗೆ ತಲುಪುವಂತೆ ಕಳುಹಿಸುತ್ತಿದ್ದರು.
ಬ್ಯಾಲೇಟ್ ಪೇಪರ್ ತೆಗೆದುಕೊಂಡು ಮನೆಗೆ ಹೋದವರು, ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಎದುರು ವೋಟ್ ಮಾಡಿ ಅವರಿಂದ ಸೈ ಎನಿಸಲುಕೊಳ್ಳುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದರಿಂದ ಈ ಬಾರಿ ಕರ್ತವ್ಯಕ್ಕೆ ನಿಯೋಜನೆಯಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮನೆಗಳಿಗೆ ತೆಗೆದುಕೊಂಡು ಹೋಗಲು ಬ್ಯಾಲೇಟ್ ಪೇಪರ್ ಕೊಡುತ್ತಿಲ್ಲ.
ನಾಮಪತ್ರ ಹಿಂಪಡೆಯಲು ಕೊನೆಯ ದಿನ ಮುಗಿದ ಎರಡು ದಿನಗಳೊಳಗೆ ಬ್ಯಾಲೇಟ್ ಪೇಪರ್ ಪ್ರಿಂಟ್ ಆಗಲಿವೆ. ಅವುಗಳನ್ನು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಸಂಬಂಧ ತರಬೇತಿ ಏರ್ಪಡಿಸುವ ಸ್ಥಳದಲ್ಲೇ ನೀಡಿ ಅಲ್ಲೇ ಅವುಗಳಿಗೆ ವೋಟ್ ಹಾಕಿಸಿ ಹಿಂಪಡೆಯಲಾಗುತ್ತಿದೆ.
ಬ್ಯಾಲೇಟ್ ಪೇಪರ್‌ವನ್ನು ಅಭ್ಯರ್ಥಿಗಳಿಗೆ ತೋರಿಸುವ ಕೆಲವು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪ್ರಯತ್ನಕ್ಕೆ ಬ್ರೇಕ್ ಹಾಕಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement