ಕಾಂಗ್ರೆಂಸ್ ಪರ ಮೋಟಮ್ಮ ಮತಯಾಚನೆ
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಹಾಗೂ ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರು ನಗರದಲ್ಲಿ ಮತಯಾಚಿಸಿದರು.
ಕೆ.ಎಸ್. ಶಾಂತೇಗೌಡ ಅವರು ಇಲ್ಲಿನ ದರ್ಜಿ ಬೀದಿಯಲ್ಲಿರುವ ಶ್ರೀಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನೇಕಾರರ ಬೀದಿ, ದರ್ಜಿ ಬೀದಿ, ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ನಡೆಸಿದರು. ಮೋಟಮ್ಮ ಅವರು ಕುಂಬಾರ ಬೀದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.
ಮಹಮದ್ ಅಕ್ಬರ್, ಅನು ಮಧುಕರ್, ಇಂದಾವರ ಲೋಕೇಶ್, ಅನಿಲ್ ಪ್ರಕಾಶ್, ಎಂ.ಸಿ. ಶಿವಾನಂದಸ್ವಾಮಿ, ಶ್ರೀಧರ್ ಉರಾಳ್, ಓಂಕಾರೇಗೌಡ, ಪ್ರಸಾದ್ ಅಮೀನ್, ಸಂದೀಪ್, ಅಣ್ಣೇಗೌಡ ಇದ್ದರು.