ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಷೇತ್ರದ ಅಭಿವೃದ್ಧಿ ಜನ ಗುರುತಿಸಿದ್ದಾರೆ: ಸಿಟಿ ರವಿ

Rashmi Kasaragodu
Updated On : 25 Apr 2013, 11:31 am

ನಗರದಲ್ಲಿ ಸಿಟಿ ರವಿ ದಂಪತಿ ಚುನಾವಣಾ ಪ್ರಚಾರ ೤ ಬೇನಾಮಿ ಗುತ್ತಿಗೆ ಆರೋಪದಲ್ಲಿ ಹುರುಳಿಲ್ಲ


ಕಪ್ರ ವಾರ್ತೆ, ಚಿಕ್ಕಮಗಳೂರು, ಏ.24  
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವ ಸಚಿವ ಸಿ.ಟಿ. ರವಿ ಅವರು ಒಂದೆಡೆ ಚುನಾವಣಾ ಪ್ರಚಾರ ನಡೆಸಿದ್ದರೆ, ಇನ್ನೊಂದೆಡೆ ಅವರ ಪತ್ನಿ ಪಲ್ಲವಿ ರವಿ ಅವರು ಬುಧವಾರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
 ಪಲ್ಲವಿ ರವಿ ಅವರು, ನಗರದ ಹೊರವಲಯದ ಕೆಂಪನಹಳ್ಳಿ, ಬೀಕನಹಳ್ಳಿ, ಹಂಪಾಪುರ ಹಾಗೂ ಉಪ್ಪಳ್ಳಿಯಲ್ಲಿ ಪ್ರಚಾರ ನಡೆಸಿದ್ದರೆ, ಸಿ.ಟಿ. ರವಿ ಅವರು ಹಿರೇಮಗಳೂರು, ಲಕ್ಷ್ಮೀಪುರ, ಶಂಕರಪುರ, ಪಂಪಾನಗರ ,ತಮಿಳು ಕಾಲೋನಿ  ಹಾಗೂ ಷರ್ಯ್ಗೀಲ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಅಭಿವೃದ್ಧಿಯೇ ಶ್ರೀರಕ್ಷೆ: ಗ್ರಾಮಾಂತರ ಪ್ರದೇಶದಲ್ಲಿ ಪಲ್ಲವಿ ರವಿ ಅವರು ಪ್ರಚಾರ ನಡೆಸಿದ ವೇಳೆಯಲ್ಲಿ ಸ್ಥಳೀಯ ಮಹಿಳೆಯರು ಅವರಿಗೆ ಆರತಿ ಎತ್ತಿದರು. ಇದೇ ವೇಳೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಯಾಚನೆಗೆ ತೆರಳಿದಾಗ ನಾವು ಹೋರಾಟ ಮಾಡಿರುವುದು ಬಿಟ್ಟರೆ, ಯಾವುದೆ ಅಭಿವೃದ್ಧಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಜನ ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ದುಗುಡ ಕಾಡುತ್ತಿತ್ತು. ಆಗ ಬಿಜೆಪಿ ಕೈ ಹಿಡಿದ ಜನ, ಕ್ಷೇತ್ರಲ್ಲಾದ ಅಭಿವೃದ್ದಿಯನ್ನು ಗಮನಿಸಿ ತಮ್ಮನ್ನು ಹರಸಲಿದ್ದಾರೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
 ಕ್ಷೇತ್ರದಲ್ಲಾಗಿರುವ ಅಭಿವೃದ್ಧಿಯನ್ನು ಸಹಿಸಲಾಗದೆ ಕಾಂಗ್ರೆಸ್, ಜೆಡಿಎಸ್ ಮಾಡುತ್ತಿರುವ ಅಪಪ್ರಚಾರವನ್ನು ನಂಬುವಂತಹ ದಡ್ಡ ಮತದಾರರು ಇಲ್ಲಿಲ್ಲ.  ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ತಂದಿದ್ದು, ಅದರ ಕಟ್ಟಡ ಪೂರ್ಣಗೊಳಿಸಬೇಕೆಂಬ ಆಸೆಗೆ ಮತದಾರರ ಆಶೀರ್ವಾದ ಅಗತ್ಯ ಎಂದರು.
ಆಶೀರ್ವದಿಸಿ: ಹಿರೇಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ, ಯಾವುದೇ ವ್ಯಕ್ತಿಯ ವೈಯುಕ್ತಿಕ ಅಧಿಕಾರಕ್ಕಾಗಿ ನಿಮ್ಮ ಮತ ವ್ಯಯವಾಗದಂತೆ ವಿಧಾನಸೌದದಲ್ಲಿ ಮೇಜು ತಟ್ಟಿ ಊರಿನ ಅಭಿವೃದ್ದಿ ಜೊತೆ, ಸಾಮಾನ್ಯ ಜನರ ಸಮಸ್ಯೆಗೆ ಸಮರ್ಥವಾಗಿ ಸ್ಪಂದಿಸುವ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಎಂದು ಹೇಳಿದರು.
ಸುಳ್ಳು ಆರೋಪ: ಸಿಟಿಆರ್ ಬೇನಾಮಿ ಹೆಸರಿನಲ್ಲಿ ಕಂಟ್ರಾಕ್ಟ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುಳ್ಳು ಆರೋಪ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ 6 ವರ್ಷಗಳ ಕಾಲ ಅಂಬಳೆ ರಸ್ತೆ, ಹೆಜ್ಜಗೇನಹಳ್ಳಿ ರಸ್ತೆ ಸೇರಿದಂತೆ ಹಲವು ಪ್ರದೇಶದ ರಸ್ತೆಗಳನ್ನು ಕಂಟ್ರಾಕ್ಟ್ ಮಾಡಿದ್ದು ತಾವೆ ಎಂಬುದನ್ನು ಶಾಂತೆಗೌಡರು ಜನರಿಗೆ ತಿಳಿಸಲು. ಆ ಕಾಮಗಾರಿಗಳು ಕಳಪೆಯಾಗಿದ್ದರೆ ಅದಕ್ಕೆ ಅವರೇ ಹೊಣೆ ಎಂಬುದನ್ನು ಮರೆಯಬಾರದು. ಆರೋಪ ಮಾಡುವಾಗ ಎಚ್ಚರಿಕೆವಹಿಸಿ ಎಂದು ಕಿವಿ ಮಾತು ಹೇಳಿದರು.
 ಹಿರೇಮಗಳೂರು ಜಗದೀಶ್ ಮಾತನಾಡಿ, ಸ್ವಾಮೀಜಿ ಎದುರು ಮಾತು ಕೊಟ್ಟು ಅದನ್ನು ಉಲಂಘಿಸಿ ಮತದಾರರಿಗೆ ಈಡಿ ಗಂಟು ನೀಡುತ್ತಾ ವಾಮಮಾರ್ಗ ಅನುಸರಿಸಿಸುತ್ತಿರುವುದು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಎಂದು ಟೀಕಿಸಿದರು.
 ನಗರಸಭೆ ಸದಸ್ಯ ಹೆಚ್.ಡಿ. ತಮ್ಮಯ್ಯ, ಮಾಜಿ ಸದಸ್ಯ ಹೆಚ್.ಜೆ. ಜಾನಯ್ಯ, ಮುಖಂಡರಾದ ಸಿ.ಎಸ್. ರಂಗನಾಥ್, ವರಸಿದ್ದಿ ವೇಣುಗೋಪಾಲ್, ಸಿಡಿಎ ಸದಸ್ಯ ಮಂಜುನಾಥ್, ರೇವನಾಥ್, ಆಟೋ ರಾಜು, ಮೋಹನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement