ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬ್ರಾಹ್ಮಣ ಪರಿಷತ್ ಅಸ್ತಿತ್ವಕ್ಕೆ

Rashmi Kasaragodu
Updated On : 25 Apr 2013, 11:34 am

ಕ.ಪ್ರ.ವಾರ್ತೆ, ನರಸಿಂಹರಾಜಪುರ: ಏ.24
ಬ್ರಾಹ್ಮಣ ಸಂಘಟನೆಗೆ ಒತ್ತು ನೀಡಲು ಶೃಂಗೇರಿ ಕ್ಷೇತ್ರ ಮಟ್ಟದ ಬ್ರಾಹ್ಮಣ ಪರಿಷತ್ ಎಂಬ ಸಂಘಟನೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘಟನೆಯ ಮಾಧ್ಯಮ ವಕ್ತಾರ ಎಂ.ವಿ. ರಾಜೇಂದ್ರ ಹೇಳಿದರು.
  ಅವರು ಪತ್ರಿಕಾ ಹೇಳಿಕೆ ನೀಡಿ, ಕೊಪ್ಪದಲ್ಲಿ ಹಿರಿಯ ಪತ್ರಕರ್ತ ಹಾಗೂ ಬ್ರಾಹ್ಮಣ ಸಮಾಜದ ಮುಖಂಡ ಪ್ರಭಾಕರ್ ಕಾರಂತ್ ಅಧ್ಯಕ್ಷತೆಯಲ್ಲಿ ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಬ್ರಾಹ್ಮಣ ಮುಖಂಡರ ಸಭೆ ನಡೆದು ಕ್ಷೇತ್ರ ಮಟ್ಟದ ಬ್ರಾಹ್ಮಣ ಪರಿಷತ್ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.
ಯಾರ ವಿರುದ್ಧವೂ ಅಲ್ಲ: ಬ್ರಾಹ್ಮಣ ಸಂಘಟನೆ ಯಾರ ವಿರುದ್ಧವೂ ಅಲ್ಲ. ಸಾವಿರಾರು ವರ್ಷದಿಂದ ಕಾಪಾಡಿಕೊಂಡು ಬಂದ ಪರಂಪರೆ, ಸಂಸ್ಕೃತಿಯನ್ನು ಮತ್ತಷ್ಟು ಸದೃಢಗೊಳಿಸಲು ಇಂತಹ ಸಂಘಟನೆ ಅಗತ್ಯ ಎಂದು ಸಭೆ ಅಭಿಪ್ರಾಯಪಟ್ಟಿತು. ಬ್ರಾಹ್ಮಣ ಸಮಾಜವನ್ನು ಗುತ್ತಿಗೆ ಹಿಡಿದಂತೆ ಕೆಲ ವ್ಯಕ್ತಿಗಳು ವರ್ತಿಸುತ್ತಿದ್ದು ಬ್ರಾಹ್ಮಣರು ಎಂದೂ ತಮ್ಮನ್ನು ಯಾರಿಗೂ ಮಾರಿಕೊಂಡಿಲ್ಲ ಎಂದರು.
 ಸಮುದಾಯದವರು ಆತ್ಮಸಾಕ್ಷಿಗೆ ಅನುಗುಣವಾಗಿ ಕಾಲ, ಕಾಲಕ್ಕೆ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳನ್ನು ಬೆಂಬಲಿಸಿ ಬೆಳೆಸಿದ್ದಾರೆ. ಇದು ಸಮುದಾಯದ ದೊಡ್ಡತನವೇ ಹೊರತು ದೌರ್ಬಲ್ಯವಲ್ಲ ಎಂದು ಸಂಘಟನೆ ಸೃಷ್ಟಪಡಿಸಿತು.
ಗಂಭೀರ ಪರಿಗಣನೆ: ಇತ್ತೀಚಿಗೆ ಸಚಿವ ಡಿ.ಎನ್. ಜೀವರಾಜ್ ಬ್ರಾಹ್ಮಣ ಜನಾಂಗಕ್ಕೆ ಅವಹೇಳನಕರ ರೀತಿಯಲ್ಲಿ ಮಾತನಾಡಿದರು ಎಂಬ ಆರೋಪದ ಬಗ್ಗೆ  ಸಭೆಯಲ್ಲಿ ಚರ್ಚೆ ನಡೆದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ಈ ಬಗ್ಗೆ ಸಭೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಇಂತಹ ತಪ್ಪು ಪುನರಾವರ್ತನೆಯಾದಲ್ಲಿ ಪರಿಣಾಮಕಾರಿ ಹೋರಾಟ ರೂಪಿಸಲಾಗುತ್ತದೆ ಎಂದು ಸಭೆ ನಿರ್ಣಯಿಸಿದೆ ಎಂದು ಎಂ.ವಿ. ರಾಜೇಂದ್ರ ತಿಳಿಸಿದ್ದಾರೆ.
 ಮೂರೂ ತಾಲೂಕುಗಳ ತಲಾ 10 ಸದಸ್ಯರ ಸ್ಥಾಪಕ ಸದಸ್ಯರ ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ತ ಬ್ರಾಹ್ಮಣರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಸಭೆ ನಿರ್ಧರಿಸಿದೆ. ಸ್ಥಾಪಕ ಸದಸ್ಯರು ಮುಂದಿನ ವಿಧಾನಸಭೆ ಚುನಾವಣೆಯ ನಂತರ ಸಭೆ ಸೇರಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
  3 ತಾಲೂಕಿನ ಮುಖಂಡರಾದ ಮೊದಲಮನೆ ವಿಶ್ವನಾಥ್, ತಲಮಕ್ಕಿ ಸುಬ್ರಮಣ್ಯ, ಯಜ್ಞಪುರುಷ ಭಟ್, ಚೇಪಗೋಡು ಶಿವಶಂಕರ್ ರಾಯರು, ನಾಗರಾಜ್ ಪುರಾಣಿಕ್, ಗೋಪಿನಾಥ್, ಎಂ.ಆರ್. ರವಿಶಂಕರ್, ಬಸ್ತಿಕಟ್ಟೆ ಸತೀಶ್, ಶ್ರೀನಾಥ್, ಎ.ಜಿ.ಎಸ್. ಮೂರ್ತಿ, ಶೃಂಗೇರಿ ಅವಿನಾಶ್, ಎನ್.ಎಸ್. ಪ್ರಸನ್ನಕುಮಾರ್, ಕೆ.ವಿ. ಜಯಕರ, ಜಿ.ಎಂ. ಹರ್ಷ ಸೇರಿದಂತೆ ಮೂರು ತಾಲೂಕಿನ 100 ಕ್ಕೂ ಹೆಚ್ಚು ಬ್ರಾಹ್ಮಣ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement