ಮಣಿಪಾಲ್ ಕಾರ್ಡ್ಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಮಣಿಪಾಲ ಕಸ್ತೂರ ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 1ರಿಂದ ಒಂದು ವರ್ಷ ವಾಯಿದೆಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ಒಬ್ಬರಿಗೆ ರು. 250, ಗಂಡ, ಹೆಂಡತಿ ಮತ್ತು 21 ವರ್ಷದೊಳಗಿನ ಮಕ್ಕಳು ಸೇರಿದಂತೆ ರು. 500 ಹಾಗೂ ಒಂದು ವೇಳೆ ಅರ್ಜಿದಾರ ತನ್ನ ತಂದೆ, ತಾಯಿಯ ಹೆಸರನ್ನು ಕಾರ್ಡ್ನಲ್ಲಿ ನೋಂದಾಯಿಸಿಕೊಂಡರೆ 700 ಪಾವತಿ ಮಾಡಬೇಕಾಗುತ್ತದೆ. ಕಳೆದ ವರ್ಷ ನೋಂದಾಯಿಸಿದ ಕಾರ್ಡ್ದಾರರಿಗೆ ಈ ಬಾರಿ ನೋಂದಣಿ ಮಾಡಿಸುವಾಗ ಶೇ.10ರಷ್ಟು ರಿಯಾಯಿತಿ ಇರುತ್ತದೆ. ಹೊರ ರೋಗಿಗಳಿಗೆ ವೈದ್ಯಕೀಯ ತಪಾಸಣೆಯಲ್ಲಿ ಶೇ.50ರಷ್ಟು ಹಾಗೂ ಒಳರೋಗಿಗಳಾಗಿ ದಾಖಲಾದವರಿಗೆ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಅಲ್ಲದೇ, ಮಣಿಪಾಲ್ ಆಸ್ಪತ್ರೆಯಲ್ಲಿ ಖರೀದಿಸಿದ ಔಷಧಿಗಳ ಒಟ್ಟು ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ಪ್ರತಿನಿಧಿ ಎಂ. ಬಾಪೂಜಿ ತಿಳಿಸಿದ್ದಾರೆ. ವಿವರಗಳಿಗಾಗಿ- 9916131880.