ವೀರಭದ್ರ ಸ್ವಾಮಿ ರಥೋತ್ಸವ
ಹೊನ್ನಾಳಿ: ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಐತಿಹಾಸಿಕ ಶ್ರೀ ವೀರಭದ್ರ ಸ್ವಾಮಿ ದೇವರ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆ ಹಾಗೂ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಂಡಾರ್ಚನೆ ವೇಳೆ ವೀರಗಾಸೆ ಗಣವೇಷಧಾರಿಯೊಬ್ಬರು ವೀರಗಾಸೆ ನರ್ತನ ಮಾಡುತ್ತಾ ಕೆಂಡದ ಮೇಲೆ ಕೂಡ ನರ್ತನ ಮಾಡಿದರು. ಪ್ರತಿವರ್ಷ ನಡೆಯುವ ಈ ಉತ್ಸವದಲ್ಲಿ ಕೆಂಡಾರ್ಚನೆ ವಿಶೇಷವಾಗಿದ್ದು, ಹಲವಾರು ಹರಿಕೆ ಹೊತ್ತ ಭಕ್ತರು ಕೆಂಡದ ಮೇಲೆ ನಡೆಯುವ ಮೂಲಕ ತಮ್ಮ ಹರಿಕೆ ತೀರಿಸಿದರು. ನಂತರ ದೇವರಿಗೆ ಪೂಜೆ ಸಲ್ಲಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಯಾಸಿನಕೆರೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಅಗಮಿಸಿ ಪೂಜೆ ಸಲ್ಲಿಸಿದರು.