ಇಂದು ಜಿಲ್ಲೆಗೆ ಶೆಟ್ಟರ್ ಭೇಟಿ (ಸುದ್ದಿ ಸಂಕ್ಷೇಪ)
ಚಿಕ್ಕಮಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿಗೆ ಆಗಮಿಸಲಿರುವ ಅವರು 11 ಗಂಟೆಗೆ ಸಖರಾಯಪಟ್ಟಣದಲ್ಲಿ ನಡೆಯಲಿರುವ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಸಚಿವ ಸಿ.ಟಿ. ರವಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಅವರು ಕಡೂರು ಮತ್ತು ತರೀಕೆರೆಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ತರೀಕೆರೆಗೆ ಸಿಎಂ
ತರೀಕೆರೆ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಏ.26 ರಂದು ಮಧ್ಯಾಹ್ನ 2-30ಕ್ಕೆ ತರೀಕೆರೆ ಪಟ್ಟಣಕ್ಕೆ ಆಗಮಿಸಲಿದ್ದು, ಬಯಲು ರಂಗ ಮಂದಿರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪರವಾಗಿ ಭಾಷಣ ಮಾಡಲಿದ್ದಾರೆ ಎಂದು ಬಿಜಿಪಿ ಮುಖಂಡ ಆರ್. ದೇವಾನಂದ್ ತಿಳಿಸಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಲೆ
ಕೊಪ್ಪ: ಶೃಂಗೇರಿ ಕ್ಷೇತ್ರದ ಮತದಾರಲ್ಲಿ ಬಿಜೆಪಿ ಪರವಾದ ಅಲೆ ವ್ಯಕ್ತಾವಾಗುತ್ತಿರುವುದನ್ನು ತಿಳಿದು ಕಾಂಗೆಸ್ ಹಾತಾಶೆ ಮನೋಭಾವದಿಂದ ಚುನಾವಣಾ ಪ್ರಚಾರ ಸಭೆಗಳಲ್ಲಿ ಸೌಜನ್ಯದ ಎಲ್ಲೇ ಮೀರಿ ಮಾತನಾಡುತ್ತಿರುವುದಕ್ಕೆ ಈ ಕ್ಷೇತ್ರದ ಮತದಾರರು ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ರಾಮಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಡಿ.ಎನ್.ಜೀವರಾಜ್ ಈ ಕ್ಷೇತ್ರದ ಎಲ್ಲಾ ಧರ್ಮ ಮತ್ತು ವರ್ಗದವರನ್ನು ಸಮಾನ ರೀತಿಯಲ್ಲಿ ಪರಿಗಣಿಸಿ ಅವರ ಅಭಿವೃದ್ದಿಗೆ ಶ್ರಮಿಸಿ ಜನ ಸಮಾನ್ಯರ ಮೇಚ್ಚುಗೆ ಪಾತ್ರವಾಗಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಕ್ಕೆ ಜನತೆ ಬೆಲೆ ಕೊಡುವುದಿಲ್ಲ ಎಂದರು.
ಹಕ್ಕುಪತ್ರ ವಿವಾದ: ಈ ಭಾಗದ 14 ಸಾವಿರ ಎಕರೆ ಕಾಂದಯ ಇಲಾಖೆಯ ಭೂಮಿಯನ್ನು ಗೋಪಾಲಕೃಷ್ಣರವರು ರಾತ್ರೋರಾತ್ರಿಯಲ್ಲಿ ಅರಣ್ಯ ಇಲಾಖೆಗೆ ವರ್ಗಹಿಸಲು ಪ್ರಮುಖ ಪಾತ್ರವಹಿಸಿದವರಲ್ಲಿ ಟಿ.ಡಿ.ರಾಜೇಗೌಡರು ಮತ್ತು ಎಸ್.ವಿ.ಮಂಜುನಾಥ ರವರು ಒಬ್ಬರಾಗಿದ್ದಾರೆ. ಕಂದಯ ಇಲಾಖೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಹಿಸಿರುವುದರಿಂದ ಒತ್ತುವರಿ ಸಾಗುವಳಿದಾರರಿಗೆ ಹಕ್ಕು ಪತ್ರಕೊಡಲು ಸಾಧ್ಯವಾಗುತ್ತಿಲ್ಲ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೋರಖ್ ಸಿಂಗ್ ವರದಿ ಜಾರಿಗೆ ತರುವುದಾಗಿ ಹೇಳಿ ಗೆದ್ದು ಹೋದ ಸಂಸದ ಜಯಪ್ರಕಾಶ್ ಹೆಗ್ಡೆ ಇದುವರೆಗೆ ಇದುವರೆಗೆ ಜಾರಿಗೆ ತಂದಿಲ್ಲದ್ದರು ನಾವುಗಳು ರೈತ ಪರ ಎಂದು ಕಾಂಗ್ರೆಸ್ಸಿಗರು ಹೇಳುತ್ತಿರುವುದು ವಿಷಾದನೀಯ. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಬಿಜೆಪಿ ಸಂಘಟನಾ ಕಾರ್ಯದರ್ಶಿ ಮಂಜುನಾಥ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಸತೀಶ್,ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಯಾಕರ್, ತಾ.ಪಂ ಸದಸ್ಯ ಪೂರ್ಣಚಂದ್ರ ಹಾಜರಿದ್ದಾರು.