ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೋಮುವಾದಿ ಪಕ್ಷಗಳಿಗೆ ಮತ ಹಾಕಬೇಡಿ: ಅಶೋಕ್

Rashmi Kasaragodu
Updated On : 26 Apr 2013, 10:50 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಏ.25
ಕೋಮುವಾದಿ ಪಕ್ಷಗಳಿಗೆ ಮತವನ್ನು ಹಾಕಬಾರದು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಅವರು ಮತದಾರರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ಆಡಳಿತದ 5 ವರ್ಷಗಳು ಮಹಾದ್ರೋಹದ ಕರಾಳ ದಿನಗಳು ಪುಸ್ತಕವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರು ಪ್ರತಿದಿನ ಕರಾಳ ದಿನಗಳನ್ನು ಎದುರಿಸಿದ್ದಾರೆ. ಈ ಚುನಾವಣೆಯಲ್ಲಿ ಜನ ವಿರೋಧಿ, ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಎಲ್ಲಾ ಪಕ್ಷಗಳ ಆರ್ಥಿಕ ನೀತಿ ಒಂದೇ,. ಬಿಜೆಪಿ ಬರೀ ಪಕ್ಷವಲ್ಲ, ಇದು ಜಾತಿ ಪದ್ಧತಿಯನ್ನು ಪೋಷಿಸಿಕೊಂಡು ಬರುತ್ತಿದೆ ಎಂದು ಆರೋಪಿಸಿದರು. ವೇದಿಕೆಯ ಮುಖಂಡರಾದ ಗೌಸ್ ಮೊಹಿಯುದ್ದೀನ್, ಹಸನಬ್ಬ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement