ಬೇಗಾರು ರಮೇಶ್ಗೆ ಆರ್ಯಭಟ ಪ್ರಶಸ್ತಿ
ಶೃಂಗೇರಿ: ಕಿರುತೆರೆ, ಯಕ್ಷಗಾನ ಕಲಾವಿದ ಬೇಗಾರು ರಮೇಶ್ ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 28 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ನಾಡಿನ ಗಣ್ಯರು, ಅಭಿಮಾನಿಗಳು ಅಭಿನಂಧಿಸಿದ್ದಾರೆ.
ವಿವಿದೆಡೆ ಮಳೆ
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಬಿಸಿಲ ವಾತಾರರಣ ಮುಂದುವರೆದಿದ್ದು ಗುರುವಾರ ಮಧ್ಯಾಹ್ನ ಗುಡುಗು ಸಹಿತ ತುಂತುರು ಮಳೆ ಬಿದ್ದಿತು. ಮಧ್ಯಾಹ್ನ ಮೋಡ ಕವಿದ ವಾತಾವರಣ ಉಂಟಾಗಿತ್ತು. ಸಂಜೆಯ ವೇಳೆಗೆ ಕೆರೆಕಟ್ಟೆ, ನೆಮ್ಮಾರು, ತ್ಯಾವಣ ಸೇರಿಂದಂತೆ ಕೆಲವೆಡೆ ಸಾಧಾರಣ ಮಳೆ ಸುರಿಯಿತು.
ಕಚೇರಿ ಉದ್ಘಾಟನೆ
ಶೃಂಗೇರಿ: ಪಟ್ಟಣದ ಭಾರತೀ ಬೀದಿಯಲ್ಲಿ ಗುರುವಾರ ಜೆಡಿಎಸ್ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜೇಂದ್ರ, ತ.ಜೆಡಿಎಸ್ ಅಧ್ಯಕ್ಷ ಮಂಜುನಾಥ್, ವಿವೇಕನಂದ ಸುಂಕುರ್ಡಿ, ರಮೇಶ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.