ಮತ ನೀಡಲು ಮನವಿ
ತರೀಕೆರೆ: ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸಿದ್ದು, ತಮ್ಮ ಚಿನ್ಹೆಯಾದ ರೇಡಿಯೋ ಆಕಾರದ ಹವಾ ನಿಯಂತ್ರಣ ಗುರುತಿಗೆ ಮತ ನೀಡಿ ಆಶೀರ್ವದಿಸಿ ನಿಮ್ಮ ಕಾಯಕ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬಿ.ಆರ್. ನೀಲಕಂಠಪ್ಪ ಮನವಿ ಮಾಡಿದ್ದಾರೆ. ತಾಲೂಕಿನಾದ್ಯಂತ ಅಭಿವೃದ್ಧಿ ಕೆಲಸ ಮಾಡುವುದು ನನ್ನ ಕರ್ತವ್ಯ. ಮನಪೂರ್ವಕವಾಗಿ ಕೆಲಸ ಮಾಡಿದ್ದೇನೆ, ನನಗೆ ಮತನೀಡಿ ಎಂದು ಅವರು ಮನವಿ ಮಾಡಿದ್ದಾರೆ.