ಸದೃಢ ದೇಹಕ್ಕೆ ಯೋಗ ಸಹಕಾರಿ
ಕ.ಪ್ರ.ವಾರ್ತೆ, ತರೀಕೆರೆ, ಏ.25 ಶರೀರ ಸದೃಢವಾಗಲು ಯೋಗ ಸಹಕಾರಿಯಾಗಿದ್ದು, ಪ್ರತಿದಿನವೂ ಯೋಗಾಭ್ಯಾಸ ಮಾಡಿದರೆ ಮನಶ್ಶಾಂತಿಯೂ ಸಾಧ್ಯ ಎಂದು ಪಟ್ಟಣದ ಎಸ್.ಜೆ.ಎಂ. ಕಾಲೇಜು ಉಪನ್ಯಾಸಕ ಪ್ರೊ. ಆರ್.ವಿ ಹೆಗಡಾಳ್ ಹೇಳಿದರು.
ಅವರು, ಗುರುವಾರ ಎಸ್.ಜೆ.ಎಂ. ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ವೇದಿಕೆ, ಎನ್ನೆಸ್ಸೆಸ್ ಘಟಕಗಳ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರೊ. ಜಿ.ಎನ್. ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ, ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಯುತ್ತಾರೆ. ಅದು ನಿಶ್ಚಿತ, ಅಲ್ಲಿಯವರೆಗೆ ಮನುಷ್ಯ ಆರೋಗ್ಯವಂತನಾಗಿರಬೇಕು ಎಂದು ತಿಳಿಸಿದರು. ಕಾಲೇಜು ಗ್ರಂಥಾಲಯ ಅಧಿಕಾರಿ ಸಿ. ಜಯದೇವಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮುದಾಯಕ್ಕೆ ಉಪಯುಕ್ತವಾಗುವಂತಹ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಪ್ರೊ. ಪಿ. ಲಿಂಗಪ್ಪ ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ರಕ್ಷಿತಾ ಸ್ವಾಗತಿಸಿದರು.
ದೋರನಾಳು ಯೋಗ ಶಿಕ್ಷಕ ಮೋಹನ್ ಅವರು ನಡೆಸುತ್ತಿರವ ಈ ಯೋಗ ಶಿಬಿರದಲ್ಲಿ ಮಕ್ಕಳು ವಯಸ್ಕರು ಭಾಗವಹಿಸಿದ್ದರು.