ಕ್ಷೇತ್ರದ ಹಿತದೃಷ್ಟಿಯಿಂದ ಬಿಜೆಪಿಗೆ ಬೆಂಬಲ: ಚಂದ್ರೇಗೌಡ
ಕ.ಪ್ರ.ವಾರ್ತೆ ಟಿ ಸೊರಬ ಟಿ ಏ.26
ತಾಲೂಕಿನ ಹಿತದೃಷ್ಟಿಯಿಂದ ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಬೆಂಬಲಿಸುತ್ತಿರುವುದಾಗಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಬಿ. ಚಂದ್ರೇಗೌಡ ತಿಳಿಸಿದರು.
ಮೊನ್ನೆಯಷ್ಟೆ ಬಿಎಸ್‌ಆರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಪ್ರಸಕ್ತ ಚುನಾವಣೆಯಲ್ಲಿ ತಟಸ್ಥನಾಗಿ ಉಳಿಯುವುದಾಗಿ ತಿಳಿಸಿದ್ದ ಅವರು, ತನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ನಂತರ ಬೆಂಬಲಿಸುವ ಪಕ್ಷದ ಕುರಿತು ತಿಳಿಸುವುದಾಗಿ ಹೇಳಿದ್ದರು.
ಗುರುವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆನವಟ್ಟಿಗೆ ಆಗಮಿಸಿದ್ದ ವೇಳೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದರು. ಕೆಲ ಕರಾರಿಗನುಗುಣವಾಗಿ ಬಿಎಸ್‌ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಮುಂದಾಗಿದ್ದೆ. ಆದರೆ, ಪಕ್ಷ ಹೇಳಿದಂತೆ ನಡೆದುಕೊಳ್ಳಲಿಲ್ಲ, ಚುನಾವಣೆ ಖರ್ಚು, ವೆಚ್ಚ ನನ್ನಿಂದ ತೂಗಿಸಲು ಸಾಧ್ಯವಿಲ್ಲದ ಕಾರಣ ತಟಸ್ಥನಾಗಿರಲು ನಿರ್ಧರಿಸಿದೆ ಎಂದರು.
ಗೆಲ್ಲಿಸುತ್ತೇನೆ: ಪ್ರಸಕ್ತ ದಿನಗಳ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದರೆ ತಾಲೂಕಿಗೆ ಇನ್ನೊಬ್ಬ ಸರಳ, ಸಜ್ಜನ ವ್ಯಕ್ತಿ, ವಿಶೇಷವಾಗಿ ಇಲ್ಲೆ ಇದ್ದು, ಮತದಾರ ಸಮೂಹದ ಬವಣೆಗಳನ್ನು ಅರಿತು, ಪರಿಹಾರ ನೀಡುವಂತವರ ಅವಶ್ಯವಿದೆ.
ಈ ನಿಟ್ಟಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಚಿಕ್ಕಾವಲಿ ನಾಗರಾಜಗೌಡ ಕೃಷಿಕ, ಮಾತಿಗಿಂತ ಕೆಲಸ ಮಾಡುವವರು,
ಹಾಗಾಗಿ ತಾಲ್ಲೂಕು ಅಭಿವೃದ್ಧಿ, ನನ್ನ ಬೆಂಬಲಿಗರ ಹಿತದೃಷ್ಟಿಯಿಂದ ಅವರೊಂದಿಗೆ ಕೈಜೋಡಿಸಿದ್ದೇನೆ, ಅವರನ್ನು ಗೆಲ್ಲಿಸಿಯೂ ಗೆಲ್ಲಿಸುತ್ತೇನೆ ಎಂದರು.