ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್‌ಗೆ 120 ಕ್ಕೂ ಅಧಿಕ ಸ್ಥಾನ: ವಿಶ್ವಾಸ

Rashmi Kasaragodu
Updated On : 27 Apr 2013, 10:44 am

ಕ.ಪ್ರ.ವಾರ್ತೆ, ಮೂಡಿಗೆರೆ,ಏ.26 ಈ ಬಾರಿ ರಾಜ್ಯದಲ್ಲಿ ಜೆಡಿಎಸ್ 120 ಕ್ಕೂ ಅಧಿಕ ಸ್ಥಾನ ಪಡೆಯುವುದರೊಂದಿಗೆ ಆಡಳಿತ ನಡೆಸಲಿರುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ತಿಳಿಸಿದರು.
 ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಕೇಂದ್ರ ಕಾಂಗ್ರೆಸ್ ಹಾಗೂ ರಾಜ್ಯ ಬಿಜೆಪಿ ಪಕ್ಷಗಳ ದುರಾಡಳಿತದಿಂದ ಮತದಾರರು ಬೇಸತ್ತಿದ್ದು, ಸಾಕಪ್ಪ ಸಾಕು ಎರಡೂ  ಸರ್ಕಾರಗಳ ಸಹವಾಸ. ಬೇಕು ಜೆಡಿಎಸ್ ಸರ್ಕಾರ ಎಂಬಂತಾಗಿದೆ ಎಂದರು.
ಜೆಡಿಎಸ್‌ಗೆ ಒಲವು: ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ ಮಾತನಾಡಿ, ಈ ಬಾರಿ ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಅವರಿಗೆ ಹೆಚ್ಚಿನ ಒಲವು ಇದ್ದು. ಜೆಡಿಎಸ್ ಅಲೆ ಎದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪ್ರಚಾರ ಭಾಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಬಿ. ನಿಂಗಯ್ಯ ಬರಿಗೈ ದಾಸ ಎಂದು ಸಾರ್ವಜನಿಕವಾಗಿ ಹೇಳುವುದರ ಮೂಲಕ ತಮ್ಮ ದುಡ್ಡಿನ ಮದವನ್ನು ತೋರಿಸಿದ್ದಾರೆ. ಆದರೆ ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು. ಮತದಾರರಿಗೆ ಯಾವುದೇ ಅಮಿಷ ನೀಡದೆ ಒಲವಿನಿಂದ 40 ಸಾವಿರಕ್ಕೂ ಅಧಿಕ ಮತ ಪಡೆದು   ಅಧಿಕಾರಕ್ಕೆ ಬರುತ್ತದೆ ಎಂದರು.
 27 ನೇ ಶನಿವಾರ  ಸಂಜೆ 5 ಗಂಟೆಗೆ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ಮೂಡಿಗೆರೆಗೆ ಆಗಮಿಸಿ, ಮತದಾರರ ಬಳಿ ನಿಂಗಯ್ಯ ಪರ ಮತ ಯಾಚಿಸಲಿರುವರು ಎಂದರು.  ಬಿಳಿಯಪ್ಪಗೌಡ, ರಮೇಶ್ ಉದುಸೆ ರಘು, ವಕ್ತಾರ ಚಂದ್ರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement